ಬೆಂಗಳೂರು: ಮುಸುಕುಧಾರಿ ಕಳ್ಳರು ಖಾಸಗಿ ಶಾಲೆಯೊಂದಕ್ಕೆ ನುಗ್ಗಿ ಆಫೀಸ್ ರೂಮ್ ನಲ್ಲಿದ್ದ 28 ಸಾವಿರ ರೂ. ನಗದು ಒಂದು ಡಿವಿಆರ್ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.ಹೊಸಕೋಟೆ ತಾಲೂಕಿನ ತಿಮ್ಮಸಂದ್ರ ಗ್ರಾಮದ ಸನ್ ವ್ಯಾಲಿ ಶಾಲೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ. ಆಫೀಸ್ ರೂಮ್‍ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೃತ್ಯ ಸೆರೆಯಾಗಿದೆ. ಈ ಕುರಿತು ಶಾಲೆಯ ಆಡಳಿತ ಮಂಡಳಿ ಸೂಲಿಬೆಲೆ ಠಾಣೆಗೆ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.ವಿಡಿಯೋದಲ್ಲಿ ಏನಿದೆ?:
ಶಾಲೆಯ ರಜೆ ದಿನವಾದ ಭಾನುವಾರ ರಾತ್ರಿ ಮೂವರು ಕಳ್ಳರು, ಆಫೀಸ್ ಬೀಗ ಒಡೆದು ಒಳಗೆ ನುಗ್ಗಿದ್ದಾರೆ. ಮುಸುಕು ಧರಿಸಿದ್ದ ಅವರು, ಮುಖಕ್ಕೆ ಪೌಡರ್ ಹಚ್ಚಿಕೊಂಡಿದ್ದರು. ನಿಧಾನವಾಗಿ ಒಬ್ಬೊಬ್ಬರೆ ಒಳಗೆ ನುಗ್ಗಿದ್ದಾರೆ. ಈ ದೃಶ್ಯ ಆಫೀಸ್ ಕೊಠಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ಕ್ಯಾಮೆರಾ ನೋಡಿದ ಕಳ್ಳರು ಅದನ್ನು ಒಡೆದು ಹಾಕಿದ್ದಾರೆ.ಕಳ್ಳರು ಬೀರುವಿನಲ್ಲಿದ್ದ 28 ಸಾವಿರ ರೂ. ನಗದು ಹಾಗೂ 16 ಸಾವಿರ ಮೌಲ್ಯದ ಡಿವಿಆರ್ ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಸೂಲಿಬೆಲೆ ಪೋಲಿಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


