ಬೆಂಗಳೂರು: ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಮಗ ಅಭಿಷೇಕ್ ಎಂದರೆ ಅಚ್ಚುಮೆಚ್ಚು, ಮಗನ ಮದುವೆ ಮಾಡಬೇಕು, ಅವನ ಮೊದಲ ಚಿತ್ರವನ್ನು ನೋಡಬೇಕು ಎಂದು ಕನಸು ಕಂಡಿದ್ದರು.ಅಂಬರೀಶ್ ಅವರಿಗೆ ಇದ್ದಿದ್ದು ಎರಡೇ ಆಸೆ. ಒಂದು ಮುದ್ದಿನ ಮಗ ಅಭಿಷೇಕ್ ಅವರ ಮದುವೆ ಮಾಡ್ಬೇಕು, ಇನ್ನೊಂದು ಮಗನ ಮೊದಲ ಸಿನಿಮಾ ಅಮರ್ ಚಿತ್ರವನ್ನು ನೋಡಬೇಕು ಅಂತಾ. ರೆಬೆಲ್ ಸ್ಟಾರ್ ಎಂದಿಗೂ ಅವರ ಮಗನಿಗೆ ನೀನು ಹೀಗೆ ಇರಬೇಕು, ಇಂತದ್ದೆ ಮಾಡಬೇಕು ಎಂದು ಹೇಳಿದವರಲ್ಲ. ಅಂಬರೀಶ್ ಅವರ ಹಾಗೆ ಅಭಿಷೇಕ್‍ಗೂ ಸಿನಿಮಾ ರಂಗದಲ್ಲಿ ಆಸಕ್ತಿ ಇತ್ತು. ಆದರಿಂದ ತಮ್ಮ ಹಾಗೆ ಮಗನೂ ಉತ್ತಮ ನಟನಾಗಬೇಕು, ಜನರು ಅವನನ್ನು ಒಪ್ಪಿಕೊಳ್ಳಬೇಕು ಎಂದು ಕನಸು ಕಂಡಿದ್ದರು.ಮಗನ ಮದುವೆಯನ್ನು ತಾವೇ ಮುಂದೆ ನಿಂತು ಅದ್ಧೂರಿಯಿಂದ ಮಾಡಿ ಖುಷಿ ಪಡಬೇಕು ಎಂದು ಬಹಳ ಆಸೆ ಇಟ್ಟುಕೊಂಡಿದ್ದರು. ಆದ್ರೆ ಈ ಎರಡು ಆಸೆಗಳು ಕೊನೆಗೂ ರೆಬೆಲ್ ಸ್ಟಾರ್ ಪಾಲಿಗೆ ಈಡೇರಲೇ ಇಲ್ಲ. ತಾವು ಕಂಡಿದ್ದ ಕನಸನ್ನು ಕಣ್ತುಂಬಿಕೊಳ್ಳುವ ಮುನ್ನವೇ ವಿಧಿ ಅವರನ್ನು ಬರಸೆಳೆದು ಅಪ್ಪಿಕೊಂಡಿತ್ತು.ಸಂದೇಶ್ ನಾಗರಾಜ್ ನಿರ್ಮಾಣದ ಅಮರ್ ಚಿತ್ರಕ್ಕೆ ಅಭಿಷೇಕ್ ಬಣ್ಣ ಹಚ್ಚಿದ್ರು. ಈ ಚಿತ್ರದ ಅರ್ಧ ಭಾಗದ ಚಿತ್ರೀಕರಣವನ್ನು ಅನಾರೋಗ್ಯದ ನಡುವೆಯೂ ಅಂಬರೀಶ್ ವೀಕ್ಷಣೆ ಮಾಡಿದ್ದರು. ಆದ್ರೆ ಅಭಿಷೇಕ್ ಅವರ ಮೊದಲ ಚಿತ್ರ `ಅಮರ್’ ಹಾಗೂ ಅಭಿಷೇಕ್ ಅವರ ಮದುವೆಯನ್ನು ಕಣ್ತುಂಬ ನೋಡಲಾಗಲಿಲ್ಲ. ರೆಬೆಲ್ ಸ್ಟಾರ್ ಅವರ ಕೊನೆಯ ಎರಡು ಕನಸುಗಳು ಅವರ ಪಾಲಿಗೆ ಕನಸಾಗಿಯೇ ಉಳಿಕೊಂಡಿತು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictvSign in to your account
Username or Email Address


Password

 Remember Me


