ಹಾವೇರಿ: ಕನ್ನಡ ಅಲ್ಲ ಭಾರತ ಸಿನಿ ಇತಿಹಾಸದ ಪುಟ ಸೇರಿರೋದು ನಾಗರಹಾವು. ಈ ಚಿತ್ರದ ಮೂಲಕ ಎಂಟ್ರಿಕೊಟ್ಟ ವಿಷ್ಣುವರ್ಧನ್, ಅಂಬರೀಶ್ ದಿಗ್ಗಜರಾಗಿದ್ದಾರೆ. ಚಿತ್ರದಲ್ಲಿ ಹೇಮಚಂದ್ರ ಬಾಲರಾಮಾಚಾರಿಯಾಗಿ ಕಾಣಿಸಿಕೊಂಡಿದ್ದರು. ಅವರೀಗ ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿದ್ದು, ಪಬ್ಲಿಕ್ ಹೀರೋ ಆಗಿದ್ದಾರೆ.ಹೇಮಚಂದ್ರ ಅವರು ನಾಗರಹಾವು ಚಿತ್ರದಲ್ಲಿ ಬಾಲ ರಾಮಾಚಾರಿಯಾಗಿ ನಟಿಸಿದ್ದು, ಇವರು ಹಾವೇರಿಯ ಹಿರೇಕೆರೂರು ತಾಲೂಕಿನ ಹಂಸಭಾವಿದಲ್ಲಿ ನೆಲೆಸಿದ್ದಾರೆ. ಮೂಲತಃ ಬೆಳಗಾವಿಯ ಗೋಕಾಕ್‍ನವರಾದ ಹೇಮಚಂದ್ರ, ಉತ್ತರ ಕರ್ನಾಟಕದ ಮೊದಲ ನಾಟಕ ಕಂಪನಿ `ಶಾರದಾ ಸಂಗೀತ’ದ ಮಾಲೀಕ ಬಸವರಾಜ ಹೊಸಮನಿ ಅವರ ಪುತ್ರ. ಅಪ್ಪನ ನಾಟಕ ಕಂಪನಿಯಲ್ಲಿ ಬಾಲನಟನಾಗಿ ಹೇಮಚಂದ್ರ ಆಗಲೇ ಬಣ್ಣ ಹಚ್ಚಿದ್ದರು.ನಂತರ ರಾಜ್ ಅಭಿನಯದ ಸಂಪತ್ತಿಗೆ ಸವಾಲ್ ಹಾಗೂ ಚಾಮುಂಡೇಶ್ವರಿ ಮಹಾತ್ಮೆ, ಸ್ವಯಂವರ ಚಿತ್ರದಲ್ಲಿ ನಟಿಸಿದ್ದರು. ನಾಟಕ ಕಂಪನಿ ಮುಚ್ಚಿದಾಗ ಹಂಸಭಾವಿಗೆ ಬಂದು ನೆಲೆಸಿದ್ದು`ಮನೆ ಊಟ’ ಖಾನಾವಳಿ ಇಟ್ಟುಕೊಂಡಿದ್ದಾರೆ. ಗ್ರಾಮದಲ್ಲಿ ಬಾಲರಾಮಾಚಾರಿ ಅಂತಲೇ ಫೇಮಸ್ ಆಗಿದ್ದಾರೆ.ಒಂದು ಊಟಕ್ಕೆ 60 ರೂಪಾಯಿ ನಿಗದಿ ಮಾಡಿರೋ ಹೇಮಚಂದ್ರ ಅವರು ಕಳೆದ 16 ವರ್ಷಗಳಿಂದ ದಿವ್ಯಾಂಗರಿಗೆ ವಿಶೇಷ ರಿಯಾಯತಿ ನೀಡಿದ್ರೆ, ಪತ್ನಿಯ ಆಸೆಯಂತೆ ಗರ್ಭಿಣಿಯರಿಗೆ ಉಚಿತವಾಗಿ ಊಟ ನೀಡ್ತಿದ್ದಾರೆ ಅಂತ ಗ್ರಾಮಸ್ಥ ಬಸವನಗೌಡ ಹೊಸಳ್ಳಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.ವಿಷ್ಣುವರ್ಧನ್, ರಾಜಕುಮಾರ್ ಅಂತ ನಟ ಬಾಲಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ ಅನ್ನೋ ಹಮ್ಮು-ಬಿಮ್ಮು ಇಲ್ಲದೆ, ಹಂಸಭಾವಿಯಲ್ಲಿ ವಿಶಿಷ್ಟವಾಗಿ ಗುರ್ತಿಸಿಕೊಂಡು ಬದುಕುತ್ತಿದ್ದಾರೆ.https://www.youtube.com/watch?v=R4PKVyyKDUcಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


