ಬೆಂಗಳೂರು: ಸ್ಯಾಂಡಲ್‍ವುಡ್ ಸಿನಿಮಾ ನಟ ಮತ್ತು ಡ್ಯಾನ್ಸ್ ಮಾಸ್ಟರ್ ವಿರುದ್ಧ  ಯುವತಿ ಆತ್ಯಾಚಾರದ ಆರೋಪ  ಮಾಡಿ ದೂರು ದಾಖಲಿಸಿದ್ದಾರೆ.ಕರಣ್ ಮಹಾದೇವ್ ಅಲಿಯಾಸ್ ಮಂಜುನಾಥ್ ಎಂಬಾತನ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಈತ ಗೂಳಿಹಟ್ಟಿ ಚಿತ್ರದ ಸಹನಟನಾಗಿದ್ದು, ಡ್ಯಾನ್ಸ್ ಕಲಿಸುತ್ತೇನೆ ಎಂದು ಸ್ನೇಹ ಬೆಳೆಸಿ ಬಳಿಕ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.ದೂರಿನಲ್ಲಿ ಏನಿದೆ?
ಕರಣ್ ನನಗೆ ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದನು. ಬಳಿಕ ಮಾತನಾಡಬೇಕು ಎಂದು ಉಲ್ಲಾಳ ಉಪನಗರಕ್ಕೆ ಕರೆಸಿಕೊಂಡು ನನ್ನ ಮನೆಯ ಮೇಲ್ಗಡೆ ಸ್ಟುಡಿಯೋ ಇಟ್ಟುಗೊಂಡಿದ್ದೇನೆ. ನಿನಗೆ ಸಂಗೀತ ಹೇಳಿಕೊಡುತ್ತೇನೆ ಎಂದು ಹೇಳಿದನು. ಹೀಗಾಗಿ ನಾನು ಪ್ರತಿದಿನ ಸಂಗೀತ ಕಲಿಯಲು ಹೋಗುತ್ತಿದ್ದೆ. ಒಂದು ದಿನ ಸಲುಗೆಯಿಂದ ನನ್ನ ಹತ್ತಿರ ಬಂದು ಅಸಭ್ಯವಾಗಿ ನಡೆದುಕೊಂಡನು. ಆಗ ನಾನು ಈ ರೀತಿ ಮಾಡುವುದು ತಪ್ಪು ಎಂದು ಹೇಳಿದ್ದೆ. ಅದಕ್ಕೆ ನಿನ್ನ ಬಗ್ಗೆ ಅಪಪ್ರಚಾರ ಮಾಡುತ್ತೇನೆ, ನಿನ್ನ ತಂದೆ-ತಾಯಿಯನ್ನು ಬಿಡುವುದಿಲ್ಲ ಎಂದು ಬೆದರಿಸಿ ಅತ್ಯಾಚಾರ ಎಸಗಿದನು. ಬಳಿಕ ನಾನು ಆತನ ಮನೆಗೆ ಹೋಗೋದನ್ನು ನಿಲ್ಲಿಸಿದೆ.ಅಷ್ಟೇ ಅಲ್ಲದೇ ಲೈಂಗಿಕ ಸಂಪರ್ಕ ಹೊಂದಿರುವುದನ್ನು ಪೋಷಕರಿಗೆ ಹೇಳುತ್ತೇನೆ ಎಂದು ಬೆದರಿಸಿ ಮತ್ತೆ ಕರೆಸಿಕೊಂಡು ಅತ್ಯಾಚಾರ ಎಸಗಿದನು. ಬಳಿಕ ನನಗೆ ಬೇರೆ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿದ್ದರು. ಈ ಬಗ್ಗೆ ತಿಳಿದ ಕರಣ್, ನೀನು ಯಾರನ್ನೂ ಬೇಕಾದರೂ ಮದುವೆಯಾಗು ಆದರೆ ನಾನು ಕರೆದಾಗೆಲ್ಲಾ ಬಂದು ಲೈಂಗಿಕ ಕ್ರಿಯೆಗೆ ಸಹಕರಿಸಬೇಕು. ಇಲ್ಲವಾದರೆ ನೀನು ಮದುಯಾಗುವ ಹುಡುಗ ಮತ್ತು ಆತನ ಮನೆಯವರಿಗೆ ಹೇಳುತ್ತೇನೆ ಎಂದು ಬೆದರಿಕೆ ಒಡ್ಡುವ ಮೂಲಕ ನನ್ನನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದನು.ನಾನು ಗರ್ಭಿಣಿಯಾದೆ, ಬಳಿಕ ಅವನು ಮನೆಯ ಬಳಿ ಇರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಾವಿಬ್ಬರು ಗಂಡ-ಹೆಂಡತಿ, ನಮಗೆ ಇಷ್ಟುಬೇಗ ಮಗು ಬೇಡ ಎಂದು ಗರ್ಭಪಾತ ಮಾಡಿಸಿದನು. ಬಳಿಕ ನಾನು ಆತನ ಮನೆಗೆ ಹೋಗೋದನ್ನು ನಿಲ್ಲಿಸಿದೆ. ಈ ವೇಳೆ ನೀನು ಬರದೆ ಇದ್ದರೂ ನಿನ್ನ ಬಾಳನ್ನು ಹಾಳು ಮಾಡುತ್ತೇನೆ ಎಂದು ಹೇಳಿ ನಿಶ್ಚಿತಾರ್ಥವಾಗಿದ್ದ ಹುಡುಗನಿಗೆ ನಾವಿಬ್ಬರೂ ಸಲಿಗೆಯಿಂದ ಇದ್ದ ವಿಡಿಯೋ, ಆಡಿಯೋವನ್ನು ತೋರಿಸಿದ್ದಾನೆ. ಅವರು ನಮ್ಮ ಮನೆ ಬಳಿ ಬಂದು ಗಲಾಟೆ ಮಾಡಿ ಮದುವೆಯನ್ನು ಮುರಿದುಕೊಂಡು ಹೋಗಿದ್ದಾರೆ. ಇದಕ್ಕೆಲ್ಲಾ ಕರಣ್ ಮಹಾದೇವ್ ಕಾರಣನಾಗಿದ್ದು, ಆತನ ವಿರುದ್ಧ ಸೂಕ್ತ ಕ್ರಮಕೊಳ್ಳಬೇಕು ಎಂದು ದೂರಿನಲ್ಲಿ ಯುವತಿ ಉಲ್ಲೇಖಿಸಿದ್ದಾರೆ.ಈ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictvSign in to your account
Username or Email Address


Password

 Remember Me


