ಕಾರವಾರ: ಬೀದಿಯಲ್ಲಿ ಎಸೆದ ನವಜಾತ ಶಿಶುವೊಂದನ್ನು ನಾಯಿಗಳು ಕಿತ್ತು ತಿಂದಿರುವ ಘಟನೆ ಉತ್ತರ ಕನ್ನಡದ ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ನಡೆದಿದೆ.ಹುನಗುಂದ ಗ್ರಾಮದಲ್ಲಿ ರಸ್ತೆಬದಿಯಲ್ಲಿ ಯಾರೋ ನವಜಾತ ಶಿಶುವೊಂದನ್ನು ಎಸೆದು ಹೋಗಿದ್ದರು. ಇಂದು ಬೆಳಗ್ಗೆ ನವಜಾತ ಶಿಶುವನ್ನು ಬೀದಿ ನಾಯಿಗಳು ಕಚ್ಚಿ, ಶಿಶುವಿನ ಕೈ, ಕಾಲು, ದೇಹವನ್ನು ಚೆಲ್ಲಾಪಿಲ್ಲಿ ಮಾಡಿದೆ. ಈ ಘಟನೆಯನ್ನು ಗಮನಿಸಿದ ಗ್ರಾಮಸ್ಥರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಮೃತಪಟ್ಟ ಶಿಶು ಸುಮಾರು ನಾಲ್ಕು ದಿನದ ಹಿಂದೆ ಜನಿಸಿರಬಹುದು ಎಂದು ಸ್ಥಳೀಯರು ಊಹಿಸಿದ್ದಾರೆ. ಈಗಾಗಲೆ ಘಟನೆ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictvSign in to your account
Username or Email Address


Password

 Remember Me


