ತುಮಕೂರು: ಹೆತ್ತ ತಂದೆ ತಾಯಿಯನ್ನೇ ಪಾಪಿ ಮಗನೊಬ್ಬ ಮನೆಯಿಂದ ಹೊರಹಾಕಿರುವ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ.ತುಮಕೂರು ತಾಲೂಕಿನ ಲಕ್ಕೇನಹಳ್ಳಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾದ ನರಸಿಂಹಮೂರ್ತಿ ತನ್ನ ವೃದ್ಧ ತಂದೆ ವೆಂಕಟಪ್ಪ ಹಾಗೂ ತಾಯಿ ಗಂಗಮ್ಮನನ್ನ ದಿನನಿತ್ಯ ಹಿಂಸಿಸಿ ಮನೆಯಿಂದ ಹೊರದಬ್ಬಿದ್ದಾನೆ. ಬೀದಿಗೆ ಬಂದ ಹೆತ್ತವರು ಸೂರಿಲ್ಲದೇ ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ.ಅಷ್ಟಕ್ಕೂ ಪಾಪಿ ಪುತ್ರ ನರಸಿಂಹಮೂರ್ತಿ ವಾಸವಿರುವ ಮನೆ ಸಹೋದರ ಮೂಡಲಗಿರಿಯಪ್ಪ ಕಟ್ಟಿಸಿದ್ದು, ಮೂಡಲಗಿರಿಯಪ್ಪ ಉದ್ಯೋಗದ ನಿಮಿತ್ತ ಬೆಂಗಳೂರಲ್ಲಿ ವಾಸ ಇದ್ದು ತಾನು ಕಟ್ಟಿಸಿದ ಮನೆಯಲ್ಲಿ ತಂದೆ ತಾಯಿಯನ್ನ ಇರಿಸಿದ್ದ. ಈ ನಡುವೆ ಬೇರೆ ಊರಲ್ಲಿ ವಾಸವಿದ್ದ ನರಸಿಂಹ ಮೂರ್ತಿ ತನ್ನ ತಂದೆ ತಾಯಿಯನ್ನು ನೋಡಿಕೊಳ್ಳುವ ನೆಪದಲ್ಲಿ ಮನೆಗೆ ಬಂದಿದ್ದಾನೆ.ಇದೀಗ ಆ ಮನೆಯನ್ನೇ ತನ್ನ ಹೆಸರಿಗೆ ಬರೆದುಕೊಂಡುವಂತೆ ತಂದೆ ತಾಯಿಗೆ ಇನ್ನಿಲ್ಲದ ಹಿಂಸೆ ನೀಡಿ ಅವರು ಒಪ್ಪದಿದ್ದಾಗ ಹೆಂಡತಿ ಜೊತೆ ಸೇರಿ ಮನೆಯಿಂದ ಹೊರಹಾಕಿದ್ದಾನೆ. ಈವರೆಗೂ ಪ್ರತಿನಿತ್ಯ ಮಗ ಹಾಗೂ ಸೊಸೆ ಲತಾ ವೃದ್ಧರಿಗೆ ದೊಣ್ಣೆಯಲ್ಲಿ ಹೊಡೆಯುತ್ತಿದ್ದರು ಅಂತಾ ವೃದ್ಧ ದಂಪತಿ ಕಣ್ಣೀರಿಡುತ್ತಿದ್ದಾರೆ.ಈ ಬಗ್ಗೆ ಹೆಬ್ಬೂರು ಪೊಲೀಸರಿಗೆ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಜರಿಗಿಸಲ್ಲ ಅಂತಾ ವೃದ್ಧ ದಂಪತಿ ಆರೋಪಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictvSign in to your account
Username or Email Address


Password

 Remember Me


