ವಿಜಯಪುರ: ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಅಂತ್ಯ ಸಂಸ್ಕಾರದ ವೇಳೆ ಆಕೆಯ ಪತಿಯನ್ನು ಕೊಲೆ ಮಾಡಿರುವ ಘಟನೆಯೊಂದು ಭಾನುವಾರ ರಾತ್ರಿ ವಿಜಯಪುರ ತಾಲೂಕಿನ ಖಿಲಾರಹಟ್ಟಿ ಗ್ರಾಮದ ಸ್ಮಶಾನದಲ್ಲಿ ನಡೆದಿದೆ.ಕಾಜಲ್ ತಾಂಬೆ(20) ಭಾನುವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜು ತಾಂಬೆ(23) ಕೊಲೆಯಾದ ವ್ಯಕ್ತಿ. ರಾತ್ರಿಯೇ ಕಾಜಲ್ ಶವ ಅಂತ್ಯಸಂಸ್ಕಾರಕ್ಕೆ ಖಿಲಾರಹಟ್ಟಿಗೆ ತರಲಾಗಿತ್ತು. ಅಂತ್ಯ ಸಂಸ್ಕಾರದ ವೇಳೆ ಕಾಜಲ್ ಪೋಷಕರು ಹಾಗೂ ಸಂಬಂಧಿಕರಿಂದ ಆಕೆಯ ಪತಿ ರಾಜುವನ್ನು ಕೊಲೆ ಮಾಡಿದ್ದಾರೆ.ರಾಜು ಹಾಗೂ ಕಾಜಲ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಕಳೆದ ಒಂದು ವರ್ಷದಿಂದ ಇಬ್ಬರ ಮಧ್ಯೆ ಕಲಹ ನಡೆಯುತ್ತಿತ್ತು. ಇವರಿಬ್ಬರ ಜಗಳಕ್ಕೆ ಹಿರಿಯರು ರಾಜೀ ಪಂಚಾಯತ್ ಮಾಡಿದ್ದರು. ಆದರೆ ಭಾನುವಾರ ಸಂಜೆ ಕಾಜಲ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ರಾಜು, ತನ್ನ ಪತ್ನಿಯ ಕೊಲೆ ಮಾಡಿದ್ದಾನೆಂದು ಆಕೆಯ ಪೋಷಕರು ಹಾಗೂ ಸಂಬಂಧಿಕರು ಅಂತ್ಯ ಸಂಸ್ಕಾರದ ವೇಳೆ ಕೊಲೆ ಮಾಡಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಎಂದು ತಂದಿದ್ದ ಕಟ್ಟಿಗೆ ಹಾಗೂ ಕಲ್ಲುಗಳಿಂದ ಕಾಜಲ್ ಪೋಷಕರು ಹಾಗೂ ಸಂಬಂಧಿಕರು ರಾಜುವನ್ನು ಜಜ್ಜಿ ಕೊಲೆ ಮಾಡಿದ್ದಾರೆ.ರಾಜುವಿನ ಮೇಲೆ ಹಲ್ಲೆ ನಡೆಯುತ್ತಿದ್ದಾಗ ಅದನ್ನು ತೆಡೆಯಲು ಬಂದ ಆತನ ಸಹೋದರ ಸಂಜಯ್ ಮೇಲೂ ಕಾಜಲ್ ಪೋಷಕರು ಹಲ್ಲೆ ಮಾಡಿದ್ದಾರೆ. ಸದ್ಯ ತೀವ್ರವಾಗಿ ಗಾಯಗೊಂಡ ಸಂಜಯ್‍ನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.ರಾಜು ಕೊಲೆಯ ಮಧ್ಯೆಯೇ ತರಾತುರಿಯಲ್ಲಿ ಭಾನುವಾರ ತಡರಾತ್ರಿ ಕಾಜಲ್ ಅಂತ್ಯ ಸಂಸ್ಕಾರ ಮಾಡಿದ್ದಾರೆ. ರಾಜು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಸದ್ಯ ಈ ಬಗ್ಗೆ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictvSign in to your account
Username or Email Address


Password

 Remember Me


