ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ವಿಧವಶರಾದ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರು ಪುತ್ರ ಅಭಿಷೇಕ್ ಸಿನಿಮಾವನ್ನು ವೀಕ್ಷಿಸಬೇಕೆಂದು ಆಸೆಪಟ್ಟಿದ್ದರು. ಆದರೆ ಅವರ ಆಸೆ ಪೂರ್ಣವಾಗಿ ಈಡೇರದೇ ಇದ್ದರೂ ತಮ್ಮ ಮಗ ಅಭಿಷೇಕ್ ನ ಸಿನಿಮಾದ ಫಸ್ಟ್ ಹಾಫ್ ನೋಡಿ ಅಗಲಿದ್ದಾರೆ.ನಟ ಅಂಬರೀಶ್ ಅವರಿಗೆ ತಮ್ಮ ಮಗನ ಮೇಲೆ ಸಾಕಷ್ಟು ಕನಸುಗಳನ್ನು ಕಂಡಿದ್ದರು. ತಮ್ಮಂತೆ ಮಗ ಅಭಿಷೇಕ್ ರಾಜಕೀಯಕ್ಕೆ ಬರುವುದು ಅವರಿಗೆ ಇಷ್ಟವಿರಲಿಲ್ಲ. ಅನೇಕ ಬಾರಿ ‘ರಾಜಕೀಯ ನಮಗೇ ಸಾಕು, ಅವನಿಗೆ ಬೇಡ’ ಎಂದು ಹೇಳುತ್ತಿದ್ದರು. ಇತ್ತ ಮಗ ಅಭಿಷೇಕ್ ಅವರಿಗೂ ಕೂಡ ಅಪ್ಪನಂತೆ ಸಿನಿಮಾ ಕಡೆ ಆಸಕ್ತಿ ಇತ್ತು. ಆದ್ದರಿಂದ ಮಗ ಮುಂದೆ ದೊಡ್ಡ ನಟನಾಗಬೇಕು ಎಂದು ಅಂಬಿ ಕನಸು ಕಂಡಿದ್ದರು.ತಮ್ಮ ಕನಸಿನಂತೆ ಅಭಿಷೇಕ್ ನಟನಾಗಿ ಮಿಂಚಲು ವೇದಿಕೆ ಸಿದ್ಧವಾಗಿತ್ತು. ಈ ವೇಳೆ ಸ್ವತಃ ಅಂಬರೀಶ್ ಅವರು ಮಗನಿಗಾಗಿ ಕಥೆ ಕೇಳಿ ಓಕೆ ಮಾಡಿದ್ದರು. ಇನ್ನು ಮುಂದೆಯೂ ನಾನೇ ಅಭಿಷೇಕ್ ಕಥೆಯನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದರು. ಅಂಬರೀಶ್ ಅವರಿಗೆ ತಮ್ಮ ಮಗನ ಚೊಚ್ಚಲ ಸಿನಿಮಾವನ್ನು ನೋಡಿ ಕಣ್ತುಂಬಿಕೊಳ್ಳುವ ಆಸೆ ಇತ್ತು. ಆದರೆ ಆ ಸಿನಿಮಾವನ್ನು ನೋಡುವ ಮುನ್ನವೇ ಅಂಬಿ ಇಹಲೋಕ ತ್ಯಜಿಸಿದ್ದಾರೆ. ಇದು ಮನಸ್ಸಿಗೆ ಬೇಸರದ ಸಂಗತಿಯಾಗಿದೆ.ಮಗನ `ಅಮರ್’ ಸಿನಿಮಾವನ್ನು ಸಂಪೂರ್ಣವಾಗಿ ನೋಡದಿದ್ದರೂ, ಫಸ್ಟ್ ಹಾಫ್ ಅನ್ನು ನೋಡಿ ಖುಷಿಪಟ್ಟಿದ್ದಾರೆ. ಈ ಬಗ್ಗೆ ಅವರ ಗೆಳೆಯ, ‘ಅಮರ್’ ಸಿನಿಮಾದ ನಿರ್ಮಾಪಕ ಸಂದೇಶ್ ನಾಗರಾಜ್  ಹೇಳಿದ್ದಾರೆ.“ಅಂಬಿಗೆ ತಮ್ಮ ಮಗ ಸಿನಿಮಾರಂಗದಲ್ಲಿ ದೊಡ್ಡ ಹೀರೋ ಆಗಬೇಕು. ಜೊತೆಗೆ ದೊಡ್ಡ ಮಟ್ಟದಲ್ಲಿ ಬೆಳೆಯಬೇಕೆಂಬ ಕನಸು ಕಂಡಿದ್ದ. ಅವರಂತೆಯೇ ಅಂಬಿ ಮಗನ ಚೊಚ್ಚಲ ಸಿನಿಮಾವನ್ನು ನಿರ್ಮಿಸುವ ಅವಕಾಶ ನನಗೆ ಸಿಕ್ಕಿತ್ತು. ಈಗಾಗಲೇ ಚಿತ್ರದ ಶೂಟಿಂಗ್ ಕೊನೆಯ ಹಂತ ತಲುಪಿದೆ. ಈ ವೇಳೆ ಅಂಬಿಗೆ ಮಗ ಏನು ಮಾಡಿದ್ದಾನೆ ಎಂದು ನೋಡುವ ಆಸೆಯಾಗಿತ್ತು” ಎಂದು ಹೇಳಿದ್ದಾರೆ.ಒಂದು ದಿನ ‘ಅಮರ್’ ಶೂಟಿಂಗ್ ಏನಾಗಿದೆ ಅದನ್ನು ನಾನು ನೋಡಬೇಕು ಎಂದರು. ಅದಕ್ಕೆ ನಾನು, “ಈಗಲೇ ಬೇಡ, ಇನ್ನು ಕೆಲವು ದಿನಗಳು ಶೂಟಿಂಗ್ ಇದೆ ಬಳಿಕ ಸಿನಿಮಾ ನೋಡಬಹುದು” ಎಂದು ಹೇಳಿದ್ದೆ. ಆದರೆ ಅಂಬಿ ನಾನು ನೋಡಲೇಬೇಕು ಎಂದು ಹಠ ಮಾಡಿದ್ದರು. ಕೊನೆಗೆ ಡಬ್ಬಿಂಗ್ ಮಾಡಿಸಿ ‘ಅಮರ್’ ಸಿನಿಮಾ ಫಸ್ಟ್ ಹಾಫ್ ನೋಡಿಸಿದ್ದೆವು. ಮಗನ ಸಿನಿಮಾ ನೋಡಿ ಅಂಬಿ ಸಂತಸ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಈ ವೇಳೆ ಮಗನನ್ನು ಕರೆದು, “ತುಂಬಾ ಚೆನ್ನಾಗಿ ಅಭಿನಯಿಸಿದ್ದೀಯಾ, ಏನು ಹೆದರಬೇಡ” ಎಂದು ಬೆನ್ನುತಟ್ಟಿದ್ದರು ಅಂತ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.https://www.youtube.com/watch?v=fJfbkc_yU8Mಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictvSign in to your account
Username or Email Address


Password

 Remember Me


