ಮೈಸೂರು: ನಗರದಲ್ಲಿ ವಿದೇಶಿ ಪ್ರಜೆಯೊಬ್ಬ ಕುಡಿದು ಮನಸೋ ಇಚ್ಚೆ ಬಂದಂತೆ ಪುಂಡಾಟ ಮಾಡಿರುವ ಘಟನೆ ಮೈಸೂರು ನಂಜನಗೂಡು ರಸ್ತೆಯ ಬಳಿಯ ಮೈದಾನದಲ್ಲಿ ನಡೆದಿದೆ.ಮೈದಾನದಲ್ಲಿ ಅರೆಬೆತ್ತೆಯಾಗಿ ದಾಂಧಲೆ ಮಾಡಿದ ವಿದೇಶಿಗ ಸಿಕ್ಕ ಸಿಕ್ಕ ದ್ವಿಚಕ್ರ ವಾಹನಗಳನ್ನ ಹಿಡಿದೆಳೆದು ಕೆಳಗೆ ಬೀಳಿಸಿದ್ದಾನೆ. ಕುಡಿದ ಮತ್ತಿನಲ್ಲಿ ಪುಂಡಾಟಿಕೆ ನಡೆಸುತ್ತಿದ್ದ ವಿದೇಶಿಗನ ನಿಯಂತ್ರಿಸಲು ಸ್ಥಳೀಯರು ಹರ ಸಾಹಸ ಪಟ್ಟಿದ್ದಾರೆ. ವಿದೇಶಿಗನ ಪುಂಡಾಟವನ್ನು ಸ್ಥಳದಲ್ಲಿದ್ದವರು ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದಾರೆ.ಸ್ಥಳೀಯರೊಬ್ಬರು ಮೈದಾನದಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿ ಪುಂಡಾಟ ಮಾಡಿದ್ದಾನೆ. ಸವಾರನನ್ನು ಮುಂದಕ್ಕೆ ಹೋಗಲು ಬಿಡದೆ ಹಿಂಬದಿಯಿಂದ ಬೈಕ್ ಹಿಡಿದು ಎಳೆದಾಡಿದ್ದಾನೆ. ಬಳಿಕ ಅಷ್ಟು ದೂರ ಹೋದ ಬಳಿ ಬಿಡದೆ ಸವಾರನನ್ನು ಕೆಳಗೆ ಬೀಳಿಸಿದ್ದಾನೆ. ಅಷ್ಟೇ ಅಲ್ಲದೇ ಸವಾರನ ಹೆಲ್ಮೆಟ್ ಕಿತ್ತುಕೊಂಡು ಎಸೆದಾಡಿದ್ದಾನೆ. ಕೆಳಗೆ ಬಿದ್ದ ಸವಾರ ಹೇಗೋ ಎದ್ದಿದ್ದಾರೆ. ಆದರೂ ಮತ್ತೆ ಬಿಡದೇ ಹೋಗಿ ಕಾಟ ಕೊಟ್ಟಿದ್ದಾನೆ. ಈ ಎಲ್ಲ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.ಕೊನೆಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ವಿದೇಶಿಗನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆಯಿಂದ ಕೆಲಕಾಲ ಆತಂಕದ ವಾತವರಣ ನಿರ್ಮಾಣವಾಗಿತ್ತು. ವಿದೇಶಿಗನ ವಶಕ್ಕೆ ಪಡೆದ ಪೊಲೀಸರು ಆತನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


