ತುಮಕೂರು: ರೈಲ್ವೆ ಇಲಾಖೆಯಿಂದ ಪರಿಹಾರ ತೆಗೆದುಕೊಳ್ಳಲು ಸಹಿ ಹಾಕದ ಹಿನ್ನೆಲೆ ಚಿಕ್ಕಪ್ಪನ ಮೇಲೆ ಅಣ್ಣನ ಮಗನೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲೇಶಪುರ ಗ್ರಾಮದಲ್ಲಿ ನಡೆದಿದೆ.ವೀರಭದ್ರಯ್ಯ (50) ಹಲ್ಲೆಗೊಳಗಾದ ವ್ಯಕ್ತಿ. ವೀರಭದ್ರಯ್ಯನ ಅಣ್ಣನ ಮಗ ಮಹೇಶ್ ಹಾಗೂ ಆತನ 6 ಜನ ಸಹಚರು ಹಲ್ಲೆ ನಡೆಸಿರುವ ಆರೋಪಿಗಳು. ಶುಕ್ರವಾರ ರಾತ್ರಿ ವೀರಭದ್ರಯ್ಯ ಡೈರಿಗೆ ಹಾಲು ಹಾಕಿ ಬರುವ ವೇಳೆ ಮಹೇಶ್ ಹಾಗೂ ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ತುಮಕೂರು-ರಾಯದುರ್ಗ ರೈಲ್ವೇ ಯೋಜನೆ ನಡೆಯುತ್ತಿದ್ದ ವೇಳೆ ವೀರಭದ್ರಯ್ಯ ಹಾಗೂ ಅವರ ಅಣ್ಣನಿಗೆ ಸೇರಿದ ಎರಡು ಎಕರೆ ಜಮೀನನ್ನು ರೈಲ್ವೆ ಇಲಾಖೆ ಸ್ವಾಧೀನ ಪಡಿಸಿಕೊಂಡಿತ್ತು. ಈ ಜಮೀನು ವಿಚಾರವಾಗಿ ಪರಿಹಾರ ತೆಗೆದುಕೊಳ್ಳಲು ಕೋರ್ಟ್‍ಗೆ ಅರ್ಜಿ ಹಾಕಲು ಸಹಿ ಹಾಕುವಂತೆ ಒತ್ತಾಯಿಸಿ ವೀರಭದ್ರಯ್ಯನ ಮೇಲೆ ಮಹೇಶ್ ಹಲ್ಲೆ ಮಾಡಿದ್ದಾನೆ.ಸದ್ಯ ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ವೀರಭದ್ರಯ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತು ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ವೀರಭದ್ರಯ್ಯರ ಪತ್ನಿ ಶೈಲಜಾ ದೂರು ದಾಖಲಿಸಿದ್ದು, ಆರೋಪಿ ಮಹೇಶ್ ಹಾಗೂ ಆತನ 6 ಮಂದಿ ಸಹಚರರ ಮೇಲೆ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


