ಬೆಂಗಳೂರು: ಗ್ರಾಮದ ಯುವತಿಯರಿಗೆ ಚುಡಾಯಿಸುತ್ತಿದ್ದ ಬೀದಿ ಕಾಮುಕರಿಗೆ ಗ್ರಾಮಸ್ಥರು ಹಿಡಿದು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಗೆದ್ದಲಹಳ್ಳಿ ಗ್ರಾಮದಲ್ಲಿ ನಡೆದಿದೆ.ಸಾಕಷ್ಟು ಬಾರಿ ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಹ, ಮೂವರು ಪುಂಡರು ತಮ್ಮ ಚೇಷ್ಟೆಯನ್ನ ಮುಂದುವರಿಸಿದ್ದರು. ಇವರ ಆಟಕ್ಕೆ ಕಡಿವಾಣ ಹಾಕಲೇಬೇಕೆಂದು ನಿರ್ಧರಿಸಿದ ಗ್ರಾಮಸ್ಥರು ಈ ಬೀದಿ ಕಾಮುಕರನ್ನ ಹಿಡಿದು ಬಟ್ಟೆ ಬಿಚ್ಚಿ, ಗ್ರಾಮದ ದೇವಾಲಯದ ಕಂಬಕ್ಕೆ ಕಟ್ಟಿ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.ಇನ್ನೂ ಈ ಮೂವರು ಯುವಕರು ನೆಲಮಂಗಲ ಪಟ್ಟಣದವರಾಗಿದ್ದು, ಕಾಲೇಜಿಗೆ ಹೋಗುವ ಯುವತಿಯರನ್ನ ಚುಡಾಯಿಸುತ್ತಿದ್ದರು. ಹೀಗಾಗಿ ಗ್ರಾಮಕ್ಕೆ ಬಸ್ಸಿನಲ್ಲಿ ಪುಂಡ ಯುವಕರು ಬರುತ್ತಿರುವ ಮಾಹಿತಿಯನ್ನ ಕೂಡಲೇ ಯುವತಿಯರು ತಮ್ಮ ಪೋಷಕರಿಗೆ ತಿಳಿಸಿದ್ದಾರೆ.ಮಾಹಿತಿ ತಿಳಿದು ಆಕ್ರೋಶಗೊಂಡ ಪೋಷಕರು ಪುಂಡ ಕಾಮುಕರು ಬರುತ್ತಿದ್ದಂತೆ ಹಿಡಿದು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಪೋಲಿ ಪುಂಡರಿಗೆ ಎಚ್ಚರಿಕೆಯನ್ನ ನೀಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


