ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಯಡಿಯೂರು ಗ್ರಾಮದ ಮನೆಯಲ್ಲಿ ಎರಡು ವಿಷಕಾರಿ ಹಾವುಗಳು ಪತ್ತೆಯಾಗಿವೆ.ಯಡಿಯೂರು ಗ್ರಾಮದ ಇಂದ್ರಕುಮಾರ್ ಎಂಬವರ ಮನೆಯಲ್ಲಿ ತಡರಾತ್ರಿ ಎರಡು ಜಾತಿಯ ವಿಷಪೂರಿತ ಹಾವುಗಳು ಕಾಣಿಸಿಕೊಂಡಿವೆ. ಒಂದು ನಾಗರಹಾವಿಗಿದ್ದರೆ, ಇನ್ನೊಂದು ಕೊಳಕುಮಂಡಲದ ಹಾವು. ತಡರಾತ್ರಿ ಹಾವುಗಳು ಪರಸ್ಪರ ಬುಸುಗುಡುತ್ತಿರುವುದನ್ನು ಮನೆಯವರು ಗಮನಿಸಿದ್ದಾರೆ. ಅದೃಷ್ಟವಶಾತ್ ಹಾವುಗಳಿಂದ ಯಾರಿಗೂ ಯಾವುದೇ ಅಪಾಯ ಆಗಿಲ್ಲ.ಕೂಡಲೇ ಉರಗತಜ್ಞ ಬಾಬು ಎಂಬವರಿಗೆ ಮನೆಯಲ್ಲಿ ಬೇರೆ ಬೇರೆ ಜಾತಿಯ ಹಾವುಗಳಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಾಬು ಎರಡು ಹಾವುಗಳನ್ನು ಜಾಗರೂಕತೆಯಿಂದ ರಕ್ಷಿಸಿದ್ದಾರೆ. ಬಳಿಕ ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


