ಕಲಬುರಗಿ: ವರದಕ್ಷಿಣೆ ಬೇಕಂತ ಅದೆಷ್ಟೋ ಜನ ಡಿಮ್ಯಾಂಡ್ ಮಾಡುವುದನ್ನು ನೋಡಿದ್ದೀವಿ, ಕೇಳಿದ್ದೀವಿ. ಆದರೆ ಜಿಲ್ಲೆಯಲ್ಲಿ ವಧುದಕ್ಷಿಣೆ ಬೇಕಂತ ಹುಡುಗಿ ಮನೆಯವರೇ ಟಾರ್ಚರ್ ಮಾಡಿದ್ದಾರೆ.ಕಲಬುರಗಿ ಜಿಲ್ಲೆಯ ನಿಡಗುಂದಾ ಗ್ರಾಮದ ಅಜಯ್ ಪ್ರೀತಿಸಿ ಜ್ಯೋತಿ ಎಂಬವರನ್ನು ಮದುವೆಯಾಗಿದ್ದರು. ಒಂದೂವರೆ ವರ್ಷದಿಂದ ಅಜಯ್ ಮತ್ತು ಜ್ಯೋತಿ ಸಂಸಾರ ಮಾಡುತ್ತಿದ್ದರು. ಆದರೆ ಅಷ್ಟರಲ್ಲಿಯೇ ಜ್ಯೋತಿ ಸಹೋದರ ರವಿ ವಧುದಕ್ಷಿಣೆಗಾಗಿ ಕಿರುಕುಳ ಕೊಡಲು ಶುರು ಮಾಡಿದ್ದಾನೆ. ಅಷ್ಟೇ ಆಲ್ಲದೇ ಈ ಜೋಡಿಯನ್ನ ಕಿಡ್ನಾಪ್ ಮಾಡಿ ಅಜ್ಞಾತ ಸ್ಥಳದಲ್ಲಿಟ್ಟಿದ್ದಾನೆ ಎಂದು ಅಜಯ್ ತಾಯಿ ಆರೋಪ ಮಾಡಿದ್ದಾರೆ.ವಧುದಕ್ಷಿಣೆ ಅನ್ನೋ ಪದ್ಧತಿ ಇರುವುದು ಪಾರ್ದಿ ಜನಾಂಗದಲ್ಲಿ. ಹೀಗಾಗಿ ಪಾರ್ದಿ ಸಮುದಾಯಕ್ಕೆ ಸೇರಿದ ಅಜಯ್ ತನ್ನ ತಂಗಿ ಜ್ಯೋತಿಯನ್ನ ಪ್ರೀತಿಸಿ ಮದುವೆಯಾಗಿದ್ದಾನೆ. ಆದ್ದರಿಂದ ಪದ್ಧತಿ ಪ್ರಕಾರ ವಧುದಕ್ಷಿಣೆ ಕೊಟ್ಟಿಲ್ಲ. ಹೀಗಾಗಿ ಟಾರ್ಚರ್ ಕೊಟ್ಟಿದ್ದಾನೆ ಅನ್ನೋ ಮಾತು ಕೇಳಿ ಬರುತ್ತಿದೆ.ಅಜಯ್ ಮತ್ತು ಜ್ಯೋತಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಪ್ರಕರಣ ಕಿಡ್ನಾಪ್ ಅಂತ ಬದಲಾಗಲಿ ಎಂದು ಅಜಯ್ ಕುಟುಂಬದವರು ಆಗ್ರಹ ಮಾಡಿದ್ದಾರೆ. ಈ ಬಗ್ಗೆ ಪೊಲೀಸರನ್ನು ಕೇಳಿದರೆ ತನಿಖೆ ಮುಗಿದ ನಂತರ ಎಲ್ಲ ಗೊತ್ತಾಗಲಿದೆ ಎಂದು ಕಲಬುರಗಿಯ ಹೆಚ್ಚುವರಿ ಎಸ್‍ಪಿ ಜಯಪ್ರಕಾಶ್ ಹೇಳಿದ್ದಾರೆ.ಈಗಾಗಲೇ ಅಜಯ್ ಗೆ ಮಹಾರಾಷ್ಟ್ರದಲ್ಲಿಯೇ ಒಂದು ಮದುವೆಯಾಗಿದೆ ಮತ್ತು ಮಕ್ಕಳಿವೆ. ಅಷ್ಟಾದರೂ ಎರಡನೇ ಮದುವೆ ಬೇಕಿತ್ತಾ ಅನ್ನೋದು ಚರ್ಚೆಗೆ ಎಡೆಮಾಡಿಕೊಟ್ಟಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


