ಚಾಮರಾಜನಗರ: ಪ್ರೀತಿಸಿ ಮದುವೆಯಾಗಿದ್ದ ಯುವತಿ ಶವ ಜಿಲ್ಲೆಯ ಶಿವನ ಸಮುದ್ರದ ಬಳಿ ಕಾವೇರಿ ನಾಲೆಯಲ್ಲಿ ಪತ್ತೆಯಾಗಿದೆ.ಜ್ಯೋತಿ (20) ಮೃತ ಯುವತಿ. ಈಕೆ ಕೊಳ್ಳೇಗಾಲ ತಾಲೂಕು ಕೆವಿಎನ್ ದೊಡ್ಡಿಯ ನಿವಾಸಿಯಾಗಿದ್ದು, ನನ್ನ ಪತ್ನಿಯನ್ನು ಆಕೆಯ ಪೋಷಕರೇ ಕೊಲೆ ಮಾಡಿದ್ದಾರೆಂದು ಪತಿ ಮುತ್ತುರಾಜು ಆರೋಪಿಸಿದ್ದಾರೆ. ಈ ಸಂಬಂಧ ಮುತ್ತುರಾಜು ಪತ್ನಿ ಪೋಷಕರ ವಿರುದ್ಧವೇ ದೂರು ದಾಖಲಿಸಿದ್ದಾರೆ.ಜ್ಯೋತಿ ಮತ್ತು ಬೂದುಗುಪ್ಪೆಯ ನಿವಾಸಿ ಮುತ್ತುರಾಜು ಇಬ್ಬರು ಸಂಬಂಧಿಗಳಾಗಿದ್ದರು. ಸುಮಾರು ನಾಲ್ಕು ವರ್ಷದಿಂದ ಒಬ್ಬೊಬ್ಬರನ್ನು ಪ್ರೀತಿ ಮಾಡುತ್ತಿದ್ದರು. ಮನೆಯಲ್ಲಿ ಇವರ ಪ್ರೀತಿಯ ಬಗ್ಗೆ ತಿಳಿದಿದೆ. ಆದರೆ ಇವರ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಎಡರು ತಿಂಗಳ ಹಿಂದೆ ಪೋಷಕರ ವಿರೋಧದ ನಡುವೆಯೂ ಮುತ್ತುರಾಜುವಿನೊಂದಿಗೆ ಓಡಿ ಹೋಗಿ ಜ್ಯೋತಿ ಮದುವೆಯಾಗಿದ್ದರು.ಜ್ಯೋತಿ ಮತ್ತು ಮುತ್ತುರಾಜು ಮದುವೆಯಾಗಿ ಎಲ್ಲಿ ವಾಸ ಮಾಡುತ್ತಿದ್ದರು ಎಂದು ಯಾರಿಗೂ ತಿಳಿದಿರಲಿಲ್ಲ. ಆದರೆ ಮಂಗಳವಾರ ಶಿವನ ಸಮುದ್ರದ ಬಳಿ ಕಾವೇರಿ ನಾಲೆಯಲ್ಲಿ ಜ್ಯೋತಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಕುರಿತು ಜ್ಯೋತಿಯ ತಂದೆ ಕೃಷ್ಣಯ್ಯ ಮತ್ತು ತಾಯಿ ವೆಂಕಟಲಕ್ಷ್ಮಮ್ಮ ಸೇರಿದಂತೆ ಐವರ ವಿರುದ್ಧ ಪತಿ ಮುತ್ತುರಾಜು ದೂರು ನೀಡಿದ್ದಾನೆ.ಈ ಕುರಿತು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


