ಬೆಂಗಳೂರು: ಗುಪ್ತಚರ ಇಲಾಖೆಯ ವರದಿ ಸಿಗಲು ನಿಖಿಲ್ ಕುಮಾರಸ್ವಾಮಿ ಯಾರು ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.ಮಂಗಳವಾರ ನಿಖಿಲ್ ಕುಮಾರಸ್ವಾಮಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡುತ್ತಾ, ನಮಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿದೆ. ರೈತರು ಯಾರೂ ಈ ರೀತಿ ಗೂಂಡಾ ವರ್ತನೆ ಮಾಡಲ್ಲವೆಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಸುರೇಶ್ ಕುಮಾರ್ ಖಂಡಿಸಿದ್ದು, ಗುಪ್ತಚರ ಇಲಾಖೆಯ ವರದಿ ಸಿಗಲು ನಿಖಿಲ್ ಯಾರು ಎಂದು ಪ್ರಶ್ನಿಸಿದ್ದಾರೆ.ಗುಪ್ತಚರ ವರದಿ ಅಷ್ಟು ಸಸ್ತಾ ಆಗೋಗಿದೆಯೇ? ಗುಪ್ತಚರ ವರದಿ ಸಿಗೋದಕ್ಕೆ ನಿಖಿಲ್ ಕುಮಾರಸ್ವಾಮಿಯವರ "ಅಧಿಕಾರ" ಏನು? ಮುಖ್ಯಮಂತ್ರಿಗಳ ಮಗನಾಗಿದ್ದಕ್ಕೆ ಈ ಮಹದವಕಾಶವೇ? ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು. pic.twitter.com/bgqEtAxouM— S.Suresh Kumar (@nimmasuresh) November 21, 2018ಈ ಬಗ್ಗೆ ತಮ್ಮ ಟ್ವಿಟ್ಟರ್‍ನಲ್ಲಿ ವಿಡಿಯೋ ಸಹಿತ, ರಾಜ್ಯ ಗುಪ್ತಚರ ಇಲಾಖೆ ಅಷ್ಟೊಂದು ಸಸ್ತಾ ಆಗಿದೇಯ? ಗುಪ್ತಚರ ಇಲಾಖೆ ವರದಿಯನ್ನು ಪಡೆಯಲು ನಿಖಿಲ್ ಕುಮಾರಸ್ವಾಮಿ ಯಾವ ಅಧಿಕಾರದಲ್ಲಿದ್ದಾರೆ? ನಿಖಿಲ್ ಸಿಎಂ ಪುತ್ರ ಎನ್ನುವ ಕಾರಣಕ್ಕೆ ಗುಪ್ತಚರ ಇಲಾಖೆ ಮಹಾದವಕಾಶ ನೀಡಿತೆ? ಈ ಕೂಡಲೇ ಸಿಎಂ ಕುಮಾರಸ್ವಾಮಿಯವರು ಇದಕ್ಕೆ ಸ್ಪಷ್ಟನೆ ನೀಡಬೇಕೆಂದು ಬರೆದುಕೊಂಡಿದ್ದಾರೆ.ಕೇವಲ ಮುಖ್ಯಮಂತ್ರಿಗಳ ಪುತ್ರನಾಗಿದ್ದಕ್ಕೆ, ನಿಖಿಲ್ ಗೆ ಗುಪ್ತಚರ ಇಲಾಖೆಗಳು ವರದಿಗಳು ಹೇಗೆ ಸಿಗುತ್ತಿವೆ. ಈ ಬಗ್ಗೆ ಇಲಾಖೆಯೇ ಅವರಿಗೆ ಮಾಹಿತಿ ನೀಡುತ್ತಿದ್ದೆಯೇ ಎಂದು ಪ್ರಶ್ನಿಸುವ ಸಿಎಂ ಕುಮಾರಸ್ವಾಮಿ ಹಾಗೂ ನಿಖಿಲ್ ವಿರುದ್ಧ ಕಿಡಿಕಾರಿದ್ದಾರೆ.ಪಬ್ಲಿಕ್ ಟಿವಿಯೊಂದಿಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ ವಿಡಿಯೋಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


