ಮಂಗಳೂರು: ವ್ಯಕ್ತಿಯೊಬ್ಬ ತನ್ನ ಬುಲೆಟ್ ಬೈಕಿನಲ್ಲಿ ಸಂಚರಿಸುತ್ತಿದ್ದಾಗ ದಿಢೀರ್ ಆಗಿ ನಾಗರಹಾವು ಪ್ರತ್ಯಕ್ಷವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.ಮಂಗಳೂರಿನ ಮರಕಡ ಎಂಬಲ್ಲಿ ಈ ಘಟನೆ ನಡೆದಿದೆ. ಮರಕಡ ನಿವಾಸಿ ಬದ್ರುದ್ದೀನ್ ಎಂಬವರು ಬುಲೆಟ್ ಬೈಕ್ ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಹೆಡೆ ಎತ್ತುತ್ತಾ ಹಾವು ದಿಢೀರ್ ಆಗಿ ಬುಲೆಟ್ ನ ಮೀಟರ್ ಗೇಜ್ ಪಕ್ಕದಿಂದಲೇ ಹೊರಬಂದಿದೆ.ತಕ್ಷಣ ವಿಚಲಿತರಾದ ಬದ್ರುದ್ದೀನ್ ರಸ್ತೆ ಬದಿಯ ಪೆಟ್ರೋಲ್ ಪಂಪ್ ಬಳಿ ಬೈಕ್ ನಿಲ್ಲಿಸಿದ್ದಾರೆ. ಹಾವು ನಾಗರಾಜನ ಮರಿಯಾಗಿದ್ದು, ಆಶ್ಚರ್ಯದಿಂದಲೇ ಜನ ನೋಡಲು ಮುಗಿಬಿದ್ದಿದ್ದಾರೆ. ನಂತರ ಉರಗ ಪ್ರೇಮಿ ಗಂಗೇಶ್ ಬೋಳಾರ್ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.ಮಾಹಿತಿ ತಿಳಿದು ಸ್ಥಳಕ್ಕೆ ಉರಗ ಪ್ರೇಮಿ ಗಂಗೇಶ್ ಬೋಳಾರ್ ಬುಲೆಟ್ ಎಡೆಯಲ್ಲಿದ್ದ ಹಾವನ್ನು ಹಿಡಿದು ರಕ್ಷಿಸಿದ್ದಾರೆ. ಮನೆಯಲ್ಲಿ ಬೈಕ್ ಸ್ಟ್ಯಾಂಡ್ ಮಾಡಿದ್ದ ವೇಳೆ ನಾಗರಹಾವು ಬುಲೆಟ್ ಹತ್ತಿರಬಹುದು ಎನ್ನಲಾಗುತ್ತಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


