ಬೆಂಗಳೂರು: ಈಗಾಗಲೇ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರ ಸೀಮಂತ ಅದ್ಧೂರಿಯಾಗಿ ಮುಗಿದಿದೆ. ಇದೇ ಸಂದರ್ಭದಲ್ಲಿ ತಾನು ಗರ್ಭಿಣಿಯಾದ ಕುರಿತು ಯಶ್ ಗೆ ಹೇಳಿರುವ ವಿಚಾರವನ್ನು ಮೆಲುಕು ಹಾಕಿದ್ದಾರೆ.ರಾಧಿಕಾ ಆಸೆಯಂತೆ ರಾಕಿಂಗ್‍ಸ್ಟಾರ್ ಯಶ್ ಸೀಮಂತ ಶಾಸ್ತ್ರವನ್ನ ತಾಜ್‍ವೆಸ್ಟೆಂಡ್‍ನಲ್ಲೇ ಮಾಡಿ ಮುಗಿಸಿದ್ದಾರೆ. ಈ ಹೊತ್ತಲ್ಲಿ ತಾನು ಪ್ರೆಗ್ನೆಂಟ್ ಅಂತ ಹೇಳಿದಾಗ ಯಶ್ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ರಾಧಿಕಾ ಬಿಚ್ಚಿಟ್ಟಿದ್ದಾರೆ.ರಾಕಿಂಗ್ ಸ್ಟಾರ್ ಯಶ್ ತಂದೆಯಾಗುತ್ತಿರುವ ವಿಚಾರವನ್ನು ರಾಧಿಕಾ ಅವರು ವಿಡಿಯೋ ಮೂಲಕ  ತಮ್ಮ ಸಂತಸವನ್ನು ಹಂಚಿಕೊಂಡಿದ್ದರು.ಏಪ್ರಿಲ್ 23 ಯಶ್-ರಾಧಿಕಾ ಪಾಲಿಗೆ ಸುದಿನ. ಯಾಕೆಂದರೆ ಅಂದಿನ ದಿನ ರಾಧಿಕಾ ತಾನು ಗರ್ಭಿಣಿ ಎಂಬ ವಿಷಯ ಗೊತ್ತಾಗಿದೆ. ತಕ್ಷಣ ಪತಿ ಯಶ್ ಬಳಿ ಹೇಳಿಕೊಳ್ಳೋಕೆ ಚಡಪಡಿಸುತ್ತಿದ್ರಂತೆ. ಆದರೆ ಅಂದು ಯಶ್ ಮೈಸೂರಿನಲ್ಲಿದ್ದರು. ಆದರೂ ರಾಧಿಕಾ ಅವರು ಯಶ್‍ಗೆ ವಿಡಿಯೋ ಕಾಲ್ ಮೂಲಕ `ಐಯಾಮ್ ಪ್ರೆಗ್ನೆಂಟ್’ ಎಂದು ಸಂತಸದ ವಿಚಾರವನ್ನು ರಾಧಿಕಾ ಹೇಳಿದ್ದಾರೆ.ಯಶ್ ಅವರು ತಾನು ಅಪ್ಪನಾಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನಿಂದ ಹೂ, ಹಣ್ಣು, ವೆರೈಟಿ ಸ್ವೀಟ್ಸ್ ಖರೀದಿಸಿ ಕೇವಲ ಮೂರೇ ಮೂರು ತಾಸಿನಲ್ಲಿ ರಾಧಿಕಾ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಯಶ್ ಒಬ್ಬ ಸ್ನೇಹಿತ ಎನ್ನುವ ರಾಧಿಕಾ, ಯಶ್‍ನಂತಹ ಅಪ್ಪನನ್ನ ಪಡೆಯೋದಕ್ಕೆ ನನ್ನ ಮಗು ಏಳೇಳು ಜನ್ಮದ ಪುಣ್ಯಮಾಡಿದೆ ಅಂತ ಹೇಳಿಕೊಂಡಿದ್ದಾರೆ.ಸೀಮಂತ ಸಂಭ್ರಮದಲ್ಲಿ ರಾಧಿಕೆಗೆ ಲಕ್ಕಿ ಹ್ಯಾಂಡ್ಸ್ ಕಿಟ್ ಕೊಟ್ಟು ಸದಾಕಾಲ ಖುಷಿಯಾಗಿ ಬಾಳೋಣ ಅಂತ ಭಾಷೆ ಕೊಟ್ಟಿದ್ದಾರೆ. ಸದ್ಯಕ್ಕೆ ಡಿಸೆಂಬರ್ ಲ್ಲಿ ಮನೆಗೆ ಬರಲಿರುವ ಮುದ್ದು ಕಂದಮ್ಮನ ಆಗಮನಕ್ಕಾಗಿ ಎದುರು ನೋಡುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


