ಚಿಕ್ಕಮಗಳೂರು: ದಾರಿಯಲ್ಲಿ ಹೋಗುತ್ತಿದ್ದವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದನ್ನು ಪ್ರಶ್ನಿಸಿದ ಯುವಕರ ಮೇಲೆ ಹಲ್ಲೆ ಮಾಡಿ, ಓರ್ವನಿಗೆ ಚಾಕು ಇರಿದು ಕೊಲೆಗೈದ ಘಟನೆ ಚಿಕ್ಕಮಗಳೂರಿನ ಕದ್ರಿಮಿದ್ರಿ ಬಳಿ ನಡೆದಿದೆ.ಕದ್ರಿಮಿದ್ರಿ ನಿವಾಸಿ ಪವನ್ (22) ಮೃತ ದುರ್ದೈವಿ ಯುವಕ. ಗವನಹಳ್ಳಿ ನಿವಾಸಿ ಕಿರಣ್ ಕೊಲೆಗೈದ ಆರೋಪಿ. ಘಟನೆಯಲ್ಲಿ ಇನ್ನೋರ್ವ ಪವನ್ (28) ಎಂಬವನಿಗೂ ಕಿರಣ್ ಚಾಕು ಹಾಕಿದ್ದಾನೆ. ಪರಿಣಾಮ ಆತನೂ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಘಟನೆಯ ವಿವರ: ಕಿರಣ್ ಹಾಗೂ ಆತನ ಕೆಲವು ಸ್ನೇಹಿತು ಮದ್ಯ ಸೇವಸಿ, ಎರಡು ಕಾರಿನಲ್ಲಿ ಕದ್ರಿಮಿದ್ರಿ ಸಮೀಪದ ಹೊರ ವಲಯದಲ್ಲಿ ನಿಂತಿದ್ದರು. ಮದ್ಯದ ಮತ್ತಿನಲ್ಲಿದ್ದ ಯುವಕರು ಕಾರಿನಲ್ಲಿದ್ದ ಸಿಸ್ಟಮ್ ಹಚ್ಚಿ, ಜೋರಾಗಿ ಸೌಂಡ್ ಕೊಟ್ಟುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದವರಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದರು. ಈ ವೇಳೆ ಪವನ್ ತನ್ನ ಸ್ನೇಹಿತ ಅಮಿತ್ ಜೊತೆಗೆ ಕದ್ರಿಮದ್ರಿ ಸಮೀಪದ ಕೆರೆಯೊಂದರ ಬಳಿ ನಾಯಿಯ ಫೋಟೋ ಶೂಟ್‍ಗೆ ತೆರಳಿದ್ದರು.ಕಿರಣ್ ಸ್ನೇಹಿತರ ಕಾರ್ ಬಳಿಗೆ ಬಂದ ಪವನ್ ಸ್ನೇಹಿತರಿಗೂ ಅವಾಚ್ಯ ಪದಗಳಿಂದ ಬೈದಿದ್ದಾರೆ. ಇದರಿಂದ ಕೋಪಗೊಂಡ ಪವನ್ ಅವರ ನಡತೆಯನ್ನು ಪ್ರಶ್ನಿಸಿದ್ದಾನೆ. ಇದರಿಂದಾಗಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡಿದಿದೆ. ಇದನ್ನು ಮತ್ತೊಂದು ಕಾರಿನಲ್ಲಿ ಕುಳಿತಿದ್ದ ಕಿರಣ್ ನೋಡಿ, ಅಲ್ಲಿಂದ ಬಂದವನೇ ಏಕಾಏಕಿ ಪವನ್‍ಗೆ ಚಾಕು ಹಾಕಿದ್ದಾನೆ. ಪರಿಣಾಮ ಆತನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಈ ಘಟನೆಯಲ್ಲಿ ಇನ್ನೋರ್ವ ಪವನ್ ಎಂಬವನಿಗೂ ಕಿರಣ್ ಚಾಕು ಹಾಕಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಕಿರಣ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


