ಕೋಲಾರ: ಹಳೇ ವೈಷಮ್ಯಕ್ಕೆ ಗುಂಪವೊಂದು ಒಂದೇ ಕುಟುಂಬದ ಮೂವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕೆಜಿಎಫ್‍ನ ಮಾರಿಕುಪ್ಪಂನಲ್ಲಿ ನಡೆದಿದೆ.ಮಾರಿಕುಪ್ಪಂ ನಿವಾಸಿಗಳಾದ ಗೊರಿಲ್ಲಾ ಚಂದ್ರನ್ (40), ಬೇಲೆನ್ಸ್ ಚಂದ್ರನ್ (22) ಹಾಗೂ ಗ್ಯಾಂಬಲರ್ (75) ಹಲ್ಲೆಗೊಳಗಾದವರು. ಗೊರಿಲ್ಲಾ ಚಂದ್ರನ್ ತಲೆ, ಕೈ ಹಾಗೂ ಕಾಲುಗಳಿಗೆ ಗಾಯಗಳಾಗಿದ್ದು, ಕುಟುಂದ ಹಿರಿಯ ಯಜಮಾನ ಗ್ಯಾಂಬಲರ್ ಸ್ಥಿತಿ ಚಿಂತಾಜನಕವಾಗಿದೆ.ಘಟನೆಯ ವಿವರ: ಮಾರಿಕುಪ್ಪಂ ಸ್ಥಳೀಯ 25 ಜನರ ಗುಂಪವೊಂದು ಏಕಾಏಕಿ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಗ್ಯಾಂಬಲರ್ ಅವರ ಮನೆಗೆ ನುಗ್ಗಿ, ಬೇಲೆನ್ಸ್ ಚಂದ್ರನ್ ಮೇಲೆ ಹಲ್ಲೆಗೆ ಮುಂದಾಗಿದೆ. ಈ ವೇಳೆ ಮನೆಯಲ್ಲಿದ್ದ ಗೊರಿಲ್ಲಾ ಚಂದ್ರನ್ ಮತ್ತು ಗ್ಯಾಂಬಲರ್ ಹಲ್ಲೆ ತಡೆಯಲು ಯತ್ನಿಸಿದ್ದು, ಅವರ ಮೇಲೂ ಹಲ್ಲೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ.ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಮಾರಿಕುಪ್ಪಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


