ತುಮಕೂರು: ಎರಡು ವರ್ಷದ ಕಂದಮ್ಮಗಳಿಬ್ಬರು ನೀರಿನ ಗುಂಡಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಘಟನೆ ಕುಣಿಗಲ್ ತಾಲೂಕಿನ ಜಿವಾಜಿಹಟ್ಟಿ ಗ್ರಾಮದಲ್ಲಿ ನಡೆದಿದೆ.ಭರತ್ (2) ಮತ್ತು ಧನುಷ್ (2) ಅಸುನೀಗಿದ ಮಕ್ಕಳು. ಇವರು ತುರುವೇಕೆರೆ ತಾಲೂಕು ಗೊಲ್ಲರಹಟ್ಟಿಯ ಶಂಕ್ರಪ್ಪ ಮತ್ತು ವನಿತಾ ದಂಪತಿಯ ಮಗ ಭರತ್ ಹಾಗೂ ತಿಪಟೂರು ತಾಲೂಕಿನ ಗೊಲ್ಲರಹಟ್ಟಿಯ ಲಕ್ಷ್ಮೀ ಮತ್ತು ಪರಮೇಶ್ ದಂಪತಿ ಪುತ್ರ ಧನುಷ್ ಎಂದು ತಿಳಿದುಬಂದಿದೆ.ಭರತ್ ಮತ್ತು ಧನುಷ್ ರನ್ನು ಪೋಷಕರು ಅಜ್ಜಿ ಮನೆಗೆ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಮನೆಯ ಬಳಿ ನೀರಿನ ತೊಟ್ಟಿ ನಿರ್ಮಿಸುವ ಸಲುವಾಗಿ ಸುಮಾರು 10 ಅಡಿ ಆಳದ ಗುಂಡಿ ತೋಡಲಾಗಿತ್ತು. ಗುಂಡಿ ಸಮೀಪ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಗುಂಡಿಗೆ ಬಿದ್ದಿದ್ದಾರೆ.ಮಕ್ಕಳು ಗುಂಡಿಗೆ ಬಿದ್ದಿದ್ದನ್ನು ಮನೆಯಲ್ಲಿದ್ದವರು ಗಮನಿಸಿರಲಿಲ್ಲ. ಗುಂಡಿಯಲ್ಲಿ ನೀರಿದ್ದ ಪರಿಣಾಮ ಮಕ್ಕಳು ಮೃತಪಟ್ಟಿದ್ದಾರೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


