ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರ ಸೀಮಂತ ಕಾರ್ಯಕ್ರಮ ಇಂದು ನಡೆದಿದ್ದು, ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿಯವರು ಸ್ಯಾಂಡಲ್ ವುಡ್ ಸಿಂಡ್ರೆಲ್ಲಾಗೆ ಭಾರೀ ಉಡುಗೊರೆಯೊಂದನ್ನು ನೀಡಿದ್ದಾರೆ.ನಟರಾದ ಅಂಬರೀಶ್-ಸುಮಲತಾ ದಂಪತಿ, ಪುನೀತ್ ರಾಜ್ ಕುಮಾರ್-ಅಶ್ವಿನಿ ದಂಪತಿ, ನಿರ್ದೇಶಕ ಯೋಗರಾಜ್ ಭಟ್ ಕುಟುಂಬ, ರವಿಚಂದ್ರನ್ ಪತ್ನಿ, ತಾರಾ, ಸುಧಾರಾಣಿ, ನಿರ್ದೇಶಕ ಹರ್ಷ, ನಿರ್ಮಾಪಕ ಕೆ.ಮಂಜು, ಕಿರುತೆರೆ ಕಲಾವಿದರು ಸೇರಿದಂತೆ ಸಾಕಷ್ಟು ಕಲಾವಿದರು ಹಾಗೂ ಇತರ ಗಣ್ಯರು ಆಗಮಿಸಿ ರಾಧಿಕಾಗೆ ಶುಭ ಹಾರೈಸಿದ್ದಾರೆ.ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸೀಮಂತ ನಡೆದಿದ್ದು, ಹಸಿರು ಬಣ್ಣದ ಉಡುಗೆಯಲ್ಲಿ ಯಶ್- ರಾಧಿಕಾ ದಂಪತಿ ಮಿಂಚಿದ್ದಾರೆ.  ಗೌಡರ ಸಂಪ್ರದಾಯದಂತೆ ಸೀಮಂತ ನಡೆದಿದೆ. ಇವರಿಬ್ಬರ ಮದುವೆ ಕಾರ್ಯಕ್ರಮವೂ ಇದೇ ಹೋಟೆಲ್ ನಲ್ಲಿ ನಡೆದಿದ್ದು, ಇದೀಗ ಸೀಮಂತ ಕೂಡ ಅಲ್ಲೇ ನಡೆದಿದ್ದು ವಿಶೇಷವಾಗಿದೆ.ಯಶ್ ಹಾಗೂ ರಾಧಿಕ ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅದೇ ದಿನವೇ ಮಗು ಜನನವಾಗುತ್ತದೆ ಅಂತ ವೈದ್ಯರು ಹೇಳಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಇಂದು ಸೀಮಂತ ಕಾರ್ಯಕ್ರಮ ನಡೆದಿದ್ದು, ಡಿಸೆಂಬರ್ 9ಕ್ಕೆ ಜೂನಿಯರ್ ರಾಕಿಂಗ್ ಸ್ಟಾರ್ ಅಥವಾ ಪುಟಾಣಿ ಸ್ಯಾಂಡಲ್ ಪ್ರಿನ್ಸೆಸ್ ಆಗಮನವಾಗುತ್ತಿರುವ ಖುಷಿಯಲ್ಲಿ ಯಶ್ ಅಭಿಮಾನಿಗಳಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


