ಚಾಮರಾಜನಗರ: ಪತಿ ಮಹಾಶಯನೊಬ್ಬ ತನ್ನ ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿಯನ್ನ ಬಿಟ್ಟು ಸ್ವಂತ ತಮ್ಮನ ಪತ್ನಿಯ ಜೊತೆ ಓಡಿ ಹೋಗಿದ್ದು, ಮಕ್ಕಳು ಅಪ್ಪ ಬೇಕು ಎಂದು ಕಣ್ಣೀರಿಡುತ್ತಿರುವ ಕರುಣಾಜನಕ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಚಾಮರಾಜನಗರ ತಾಲೂಕಿನ ಹೆಚ್.ಮೂಕಳ್ಳಿಯ ನಿವಾಸಿ ಮಹದೇವಯ್ಯ(35) ತನ್ನ ಸಹೋದರನ ಹೆಂಡತಿಯನ್ನೇ 15 ದಿನಗಳ ಹಿಂದೆ ಕರೆದುಕೊಂಡು ಹೋಗಿದ್ದಾನೆ. ಇತ್ತ ಶಾಲೆಗೆ ಹೋಗುತ್ತಿರುವ ಮಕ್ಕಳು ನಮಗೆ ಅಪ್ಪ ಬೇಕು ಎಂದು ಅಳುತ್ತಿದ್ದಾರೆ.ಮಹದೇವಯ್ಯ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕಚೇರಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಈ ಹಿಂದೆ ಕೂಡ ತನ್ನ ತಮ್ಮನ ಪತ್ನಿ ಶಾಂತಮ್ಮಳೊಂದಿಗೆ ಓಡಿ ಹೋಗಿದ್ದನು. ನಂತರ ಈ ಬಗ್ಗೆ ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಮರಳಿ ಬಂದಿದ್ದನು. ಮರಳಿ ಬಂದ ಮಹದೇವಯ್ಯ ಹೆಂಡತಿ ಮಕ್ಕಳನ್ನ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದನು. ಆದರೆ ಈ ಘಟನೆ ನಡೆದ 2 ವಾರ ಕಳೆಯುವುದರೊಳಗೆ ಮತ್ತೇ ಶಾಂತಮ್ಮಳೊಂದಿಗೆ ಓಡಿ ಹೋಗಿದ್ದಾನೆ.ನನ್ನ ಮಕ್ಕಳು ಪ್ರತಿದಿನ ಅಪ್ಪ ಬೇಕು ಎಂದು ಕಣ್ಣೀಡುತ್ತಿದ್ದಾರೆ. ಅವರಿಲ್ಲದೇ ನಾನೊಬ್ಬಳು ಮಕ್ಕಳ ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ. ಅವರು ಬೇಗ ಮನೆಗೆ ವಾಪಸ್ ಬರಬೇಕು. ಒಂದು ವೇಳೆ ತಮ್ಮ ತಪ್ಪನ್ನು ತಿದ್ದಿಕೊಂಡರೇ ನಾನು ಅವರನ್ನು ಒಪ್ಪಿಕೊಳ್ಳುತ್ತೇನೆ. ಇಲ್ಲವಾದರೆ ಕಾನೂನಿಕ ಪ್ರಕಾರ ಮಕ್ಕಳ ಭವಿಷ್ಯಕ್ಕಾಗಿ ಪರಿಹಾರ ಕೊಡಿಸಿ ಎಂದು ನೊಂದ ಪತ್ನಿ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


