ಬೆಂಗಳೂರು: ಕಿಡ್ನಾಪ್ ಆಯ್ತು, ಒರಾಯಾನ್ ಮಾಲ್ ಗಲಾಟೆಯಾಯ್ತು, ಇದೀಗ ಮತ್ತೊಂದು ವಿಚಾರಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಸುನಾಮಿ ಕಿಟ್ಟಿ ಕಿರಿಕ್ ಮಾಡಿದ್ದಾನೆ.ಹೌದು. ಸುನಾಮಿ ಕಿಟ್ಟಿ ನಗರದ ಶಂಕರ ಮಠದಲ್ಲಿರೋ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದನು. ಆದ್ರೆ ಇತ್ತೀಚೆಗೆ ಆತ ಬಾಡಿಗೆ ಹಣವನ್ನು ನೀಡುತ್ತಿರಲಿಲ್ಲ. ಹೀಗಾಗಿ ಮನೆ ಮಾಲೀಕ ಶಿವಣ್ಣ ಬಾಡಿಗೆ ನೀಡುವಂತೆ ಹೇಳಿದ್ದಾರೆ. ಇದರಿಂದ ಸಿಟ್ಟುಗೊಂಡ ಕಿಟ್ಟಿ, ಶಿವಣ್ಣ ಅವರಿಗೆ ಅವಾಜ್ ಹಾಕಿದ್ದಾನೆ.ಬಾಡಿಗೆ ಎಷ್ಟು?:
ಕಿಟ್ಟಿ ತಿಂಗಳಿಗೆ 22 ಸಾವಿರದಂತೆ ಶಿವಣ್ಣ ಅವರ ಮನೆಯಲ್ಲಿ ವಾಸವಾಗಿದ್ದನು. ಆದ್ರೆ 4 ತಿಂಗಳ ಬಾಡಿಗೆ 88 ಸಾವಿರ ಕೊಡದೆ ಮನೆ ಮಾಲೀಕನಿಗೆ ಕಿಟ್ಟಿ ಸತಾಯಿಸುತ್ತಿದ್ದನು. ಹೀಗಾಗಿ ಈ ಹಣವನ್ನು ಮನೆ ಮಾಲೀಕ ಕೇಳಿದಾಗ ಕಿಟ್ಟಿ ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾನೆ.ಈ ಸಂಬಂಧ ಕಿಟ್ಟಿ ವಿರುದ್ಧ ಮಾಲೀಕ ಶಿವಣ್ಣ ಮಹಾಲಕ್ಷಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸದ್ಯ ಪೊಲೀಸರು ಕಿಟ್ಟಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.ಕಿಟ್ಟಿ ವಿರುದ್ಧ ಮಹಾಲಕ್ಷೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


