ಬೆಂಗಳೂರು: ಮೊಗ್ಗಿನ ಮನಸ್ಸಿನ ಚೆಲುವೆ ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ನಾಳೆ(ಭಾನುವಾರ) ನಡೆಯಲಿದೆ. ಈಗಾಗಲೇ ರಾಕಿಂಗ್ ಕುಟುಂಬಸ್ಥರ ಸೀಮಂತ ಶಾಸ್ತ್ರದಲ್ಲಿ ತೊಡಗಿಕೊಂಡಿದ್ದಾರೆ.ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಸೀಮಂತ ಕಾರ್ಯಕ್ರಮ ನಡೆಯಲಿದೆ. ಯಶ್ ಕುಟುಂಬಸ್ಥರು, ಆಪ್ತರು, ಬಂಧುಬಳಗದವರು ಶಾಸ್ತ್ರದಲ್ಲಿ ಭಾಗಿಯಾಗಲಿದ್ದಾರೆ. ಡಿಸೆಂಬರ್ ನಲ್ಲಿ ರಾಜಾಹುಲಿ ಮನೆಗೆ ಮುದ್ದು ಕಂದಮ್ಮನ ಆಗಮನವಾಗಲಿದ್ದು, ಆಸೆಯ ಕಣ್‍ಗಳಿಂದ ಎದುರು ನೋಡುತ್ತಿದ್ದಾರೆ.ಕೆಲವು ದಿನಗಳ ಹಿಂದೆ ಯಶ್ ಅಭಿನಯದ ಕೆಜಿಎಫ್ ಟ್ರೇಲರ್ ಬಿಡುಗಡೆ ವೇಳೆ ರಾಧಿಕಾ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಇದೇ ಡಿಸೆಂಬರ್ 21ರಂದು ಕೆಜಿಎಫ್ ಚಿತ್ರ ಮೊದಲ ವಾರದಲ್ಲಿ ಬಿಡುಗಡೆ ಆಗಲಿದ್ದು, ಮೊದಲ ವಾರದಲ್ಲಿ ರಾಕಿಂಗ್ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಲಿದೆ. ಈ ಹಿಂದೆ ಯಶ್ ಅಭಿಮಾನಿಗಳು ರಾಧಿಕಾ ಅವರ ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗಿ ಮಾಡಬೇಕೆಂದು ಯೋಚಿಸಿದ್ದರಂತೆ. ಆದ್ರೆ ಇಲ್ಲದಕ್ಕೂ ತೆರೆ ಎಳೆದಿರುವ ಯಶ್, ಸೀಮಂತ ಆಪ್ತ ಬಂಧುಗಳ ಸಮ್ಮುಖದಲ್ಲಿ ತುಂಬಾ ಸರಳವಾಗಿ ನಡೆಯಲಿದೆ ಎಂದು ಯಶ್ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರಂತೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


