ಬೆಂಗಳೂರು: ಕಳ್ಳತನ ಮಾಡಲು ಹೋಗಿ ಯುವತಿಯನ್ನು ರೇಪ್ ಮಾಡಿದ್ದ ಸೈಕೋ ರೇಪಿಸ್ಟ್ ನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.ದೇವರಾಜ್(21) ಅರೆಸ್ಟ್ ಆದ ರೇಪಿಸ್ಟ್. ನವೆಂಬರ್ 8ರಂದು ದೇವರಾಜ್ ಕಳ್ಳತನ ಮಾಡಲು ಹೋಗಿ ಮನೆಯಲ್ಲಿದ್ದ ಉತ್ತರ ಭಾರತೀಯ ಮೂಲದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದನು. ಕುರುಬರಹಳ್ಳಿಯ ಜೆ.ಸಿ ನಗರದ ನಿವಾಸಿಯಾಗಿರುವ ದೇವರಾಜ್‍ನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ದೇವರಾಜ್ ಜೆ.ಸಿ ನಗರದಲ್ಲಿ ತನ್ನ ಪೋಷಕರ ಜೊತೆ ವಾಸವಾಗಿದ್ದು, ರಾಜಾಜಿನಗರದಲ್ಲಿ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು.ನಡೆದಿದ್ದೇನು?
ಉತ್ತರ ಭಾರತೀಯ ಮೂಲದ ಮಹಿಳೆ ತನ್ನ ಇಬ್ಬರು ಸ್ನೇಹಿತರ ಜೊತೆ ಬಸವೇಶ್ವರ ನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮಹಿಳೆ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು, ದೀಪಾವಳಿಗೆಂದು ಆಕೆಯ ಇಬ್ಬರು ಸ್ನೇಹಿತರು ಊರಿಗೆ ತೆರೆಳಿದ್ದರು. ನ. 8ರಂದು ದೇವರಾಜ್ ರಾತ್ರಿ ಸುಮಾರು 9.30ಕ್ಕೆ ಕಳ್ಳತನಕ್ಕೆಂದು ಮಹಿಳೆಯ ಮನೆಯ ಕಾಲಿಂಗ್ ಬೆಲ್ ಒತ್ತಿದ್ದಾನೆ. ಮಹಿಳೆ ಬಾಗಿಲು ತೆರೆಯುತ್ತಿದ್ದಂತೆ ದೇವರಾಜ್ ಆಕೆಯನ್ನು ತಳ್ಳಿಕೊಂಡು ಹೋಗಿ ಬಲವಂತವಾಗಿ ಮನೆಗೆ ಪ್ರವೇಶಿಸಿದ್ದಾನೆ. ಅಲ್ಲದೇ ಮಹಿಳೆಯ ಕೈ ಕಚ್ಚಿ, ಪ್ರಜ್ಞೆ ತಪ್ಪಿಸಿ ಅತ್ಯಾಚಾರವೆಸಗಿದ್ದಾನೆ.ಬಂಧಿಸಿದ್ದು ಹೇಗೆ?
ಕೃತ್ಯ ಎಸಗಿದ ಬಳಿಕ ದೇವರಾಜ್ ಮನೆಯಿಂದ ಓಡಿ ಹೋಗಿದ್ದ. ರಾತ್ರಿ ಸುಮಾರು 10.49ಕ್ಕೆ ದೇವರಾಜ್ ಮನೆಯಿಂದ ಓಡಿ ಹೋಗುವಾಗ ರಸ್ತೆಯಲ್ಲೇ ಆರೋಪಿ ದೇವರಾಜ್ ಶರ್ಟ್ ಹಾಕಿಕೊಂಡ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪೊಲೀಸರು ಈ ಘಟನೆಯ ತನಿಖೆ ನಡೆಸುವಾಗ ಮೊದಲು ಸಿಸಿಟಿವಿ ದೊರೆತಿದೆ. ಈ ಸಿಸಿಟಿವಿ ದೃಶ್ಯಾವಳಿ ಮೂಲಕ ಆರೋಪಿಯ ಗುರುತು ಪತ್ತೆಯಾಗಿದ್ದು, ಇದಾದ ಬಳಿಕ ಪೊಲೀಸರು ಬೇರೆಡೆಯ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿದ್ದರು. ಅಂತಿಮವಾಗಿ ಶುಕ್ರವಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿ ಮೇಲೆ ಪ್ರಕರಣಗಳು:
ಆರೋಪಿ ದೇವರಾಜ್ ಮೇಲೆ ಈಗಾಗಲೇ ಪ್ರಕರಣಗಳು ದಾಖಲಾಗಿದೆ. ನಿಲ್ಲಿಸಿದ್ದ ವಾಹನಗಳ ಗಾಜನ್ನು ಒಡೆದಿದ್ದಕ್ಕೆ ಆರೋಪಿ ವಿರುದ್ಧ ನಂದಿನಿ ಲೇಔಟ್ ಹಾಗೂ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ ಮೂರು ತಿಂಗಳ ಹಿಂದೆ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಜೈಲು ಪಾಲಾಗಿದ್ದ. ಆದರೆ ಈಗ ಕಳ್ಳತನಕ್ಕೆ ಹೋಗಿ ಪೊಲೀಸರು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


