ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಯ ಸ್ಪರ್ಧಿ ಸ್ನೇಹಾ ಆಚಾರ್ಯ ಮೂರೇ ವಾರಕ್ಕೆ ಮನೆಯಿಂದ ಹೊರಬಂದಿದ್ದು, ಈಗ ತಮ್ಮ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ಸ್ನೇಹ ಆಚಾರ್ಯ ಬಿಗ್‍ಬಾಸ್ ಮನೆಗೆ ಹೋಗುವುದಕ್ಕೂ ಮುಂಚೆಯೇ ಮದುವೆ ಬಗ್ಗೆ ಖಚಿತಪಡಿಸಿದ್ದರು. ಸ್ನೇಹ ವಿದೇಶಿ ಹುಡುಗನ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ತಮಗೆ ವಿದೇಶಿ ಹುಡುಗನ ಜೊತೆ ಪ್ರೀತಿ ಆದ ಸಂದರ್ಭವನ್ನು ಮಾಧ್ಯಮ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.ಪ್ರೀತಿ ಹುಟ್ಟಿದ್ದು ಹೇಗೆ..?
ನನ್ನ ಭಾವಿ ಪತಿ ಹೆಸರು ರಾಯನ್ ಕೊಪ್ಕೊ. ಮೂಲತಃ ನ್ಯೂಯಾರ್ಕ್ ಅವರು, ತಮ್ಮ ಕಂಪನಿಯ ಅಭಿವೃದ್ಧಿಗಾಗಿ ಎರಡು ವರ್ಷ ಬೆಂಗಳೂರಿನಲ್ಲಿ ಇರಲು ನಿರ್ಧರಿಸಿ ಬಂದಿದ್ದರು. ಅದೇ ರೀತಿ ಅವರ ಕಂಪನಿಯ ಕೆಲಸವನ್ನು ಮುಗಿಸುತ್ತಿದ್ದರು. ಕೊನೆಯ ಎರಡು ತಿಂಗಳಲ್ಲಿ ನಾನು ಸಾಲ್ಸಾ ಡ್ಯಾನ್ಸ್ ಮಾಡಬೇಕಾದರೆ ಅವರು ನೋಡಿ ನನ್ನ ಬಳಿ ಬಂದು ‘ನಾನು ನಿಮ್ಮ ಜೊತೆ ಡ್ಯಾನ್ಸ್ ಮಾಡಬಹುದಾ’ ಎಂದು ಕೇಳಿದ್ದರು. ನಾನು ಓಕೆ ಎಂದೆ. ನಂತರ ಅವರಿಗೆ ಡ್ಯಾನ್ಸ್ ಬರಲ್ಲ ಎಂದು ನನಗೆ ಗೊತ್ತಾಯಿತು. ಆಗ ಅವರ ಸೀನಿಯರ್ ಒಬ್ಬರನ್ನ ತೋರಿಸಿ, ‘ನೀವು ಅವರ ಬಳಿ ಡ್ಯಾನ್ಸ್ ಕಲಿತು ಬನ್ನಿ, ಆಮೇಲೆ ನನ್ನ ಜೊತೆ ಡ್ಯಾನ್ಸ್ ಮಾಡಬಹುದು’ ಎಂದಿದ್ದೆ.ಸಿಕ್ಕಾಗ ಹಾಯ್, ಬಾಯ್ ಎಂದು ಮಾತನಾಡುತ್ತಿದ್ವಿ. ಅವರೇ ನನ್ನ ಬಳಿ ಬಂದು ಕಾಫಿ, ಟೀ, ತಿಂಡಿಗೆ ಕರೆಯುತ್ತಿದ್ದರು. ಆದರೆ ನಾನು ಹೋಗುತ್ತಿರಲಿಲ್ಲ. ಒಮ್ಮೆ ನಾನು ಮಕ್ಕಳಿಗೆ ನಾಟಕ ಹೇಳಿಕೊಡುವಾಗ ಒಂದು ಪಾತ್ರ ಬೇಕಿತ್ತು. ಇಂಗ್ಲೀಷ್ ಕಲಿಸುವ ವ್ಯಕ್ತಿ ಬೇಕಿತ್ತು. ಆಗ ನನಗೆ ಇವರು ನೆನಪಾಗಿ ಅವರನ್ನು ಕೇಳಿದೆ. ಅದಕ್ಕೆ ಅವರು ಒಪ್ಪಿಕೊಂಡು ಅಲ್ಲಿಂದ ಪರಸ್ಪರ ಇಬ್ಬರು ಸಮಯ ಕಳೆಯಲು ಅವಕಾಶ ಸಿಕ್ಕಿತ್ತು ಎಂದು ತಮ್ಮ ಮೊದಲ ಪರಿಚಯದ ಬಗ್ಗೆ ಹೇಳಿಕೊಂಡಿದ್ದಾರೆ.ಡೈರಿ ಬರೆಯುವ ಅವ್ಯಾಸ ಇತ್ತು:
ರಾಯನ್ ಗೆ ಡೈರಿ ಬರೆಯುವ ಅಭ್ಯಾಸವಿತ್ತು. ಅವರು ಡೈರಿಯನ್ನು ಯಾವಾಗಲೂ ಜೊತೆಯಲ್ಲೇ ಇಟ್ಟುಕೊಳ್ಳುತ್ತಿದ್ದರು. ಆದರೆ ಒಮ್ಮೆ ನನ್ನ ಕೈಗೆ ಸಿಕ್ಕಿತ್ತು. ಅದನ್ನ ನಾನು ಮನೆಗೆ ತೆಗೆದುಕೊಂಡು ಹೋಗಿ ಓದಿದೆ. ಆದರೆ ಡೈರಿಯಲ್ಲಿ ನನ್ನ ಬಗ್ಗೆನೇ ಬರೆದಿದ್ದರು. ಆಗ ಗೊತ್ತಾಯ್ತು ಅವರು ನನ್ನನ್ನು ಪ್ರೀತಿ ಮಾಡುತ್ತಾರೆ ಅಂತ. ಬಳಿಕ ಅವರು ನನಗಾಗಿ ಇನ್ನು ಒಂದು ವರ್ಷ ಬೆಂಗಳೂರಿನಲ್ಲಿ ಇರಬೇಕು ಎಂದು ನಿರ್ಧಾರ ಮಾಡಿದ್ದರು.ಇಂದಿನ ವಾಟ್ಸಪ್, ಫೇಸ್‍ಬುಕ್, ಮೆಸೇಜ್ ನಡುವೆ ಪತ್ರ ಬರೆದು, ಅದನ್ನು ಹೇಳೋಕು ಕಷ್ಟ ಪಡುತ್ತಿದ್ದನ್ನು ನೋಡಿ ನನಗೂ ಇಷ್ಟ ಆಯಿತು. ಮೊದಲಿಗೆ ಅವರು ನನ್ನ ಡೈರಿ ಓದಬೇಡಿ ಎಂದು ಹೇಳಿದ್ದರು. ಬಳಿಕ ನಾನು ಓದಿರುವ ಬಗ್ಗೆ ಅವರಿಗೆ ತಿಳಿಯಿತು. ಬಂದು ಅವರೇ ಪ್ರಪೋಸ್ ಮಾಡಿದರು. ನಾನು ಒಪ್ಪಿಕೊಂಡೆ. ಆದರೆ ಮನೆಯಲ್ಲಿ ಒಪ್ಪಿಕೊಳ್ಳಲ್ಲ ಅಂತ ಭಯವಾಗಿತ್ತು. ಬಳಿಕ ಮನೆಯವರಿಗೂ ಅವರು ಇಷ್ಟವಾದರು ಎಂದು ತನ್ನ ಪ್ರೀತಿಯ ಗುಟ್ಟು ಬಿಚ್ಚಿಟ್ಟಿದ್ದಾರೆ.ಇದೇ ನವೆಂಬರ್ 25 ರಂದು ಬೆಂಗಳೂರಿನಲ್ಲಿ ಮದುವೆ ನಡೆಯಲಿದೆ. ಮೈಸೂರು ರಸ್ತೆಯಲ್ಲಿರುವ ‘ಎಂಸಿರಿ ಕನ್ವೆನ್ಷನ್ ಹಾಲ್’ನಲ್ಲಿ ವಿವಾಹ ನಡೆಯಲಿದೆ. ಸದ್ಯಕ್ಕೆ ಮದುವೆ ನಂತರ ಪ್ಲಾನ್ ಏನು ಇಲ್ಲ. ಆದರೆ ನಾವಿಬ್ಬರೂ ಟ್ರಾವೆಲ್ ಮಾಡೋಣ ಅಂದುಕೊಂಡಿದ್ದೇವೆ ಎಂದು ಸ್ನೇಹ ಹೇಳಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


