ಚಿತ್ರದುರ್ಗ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಸಹ ಕಾರ್ಮಿಕರೇ ಕೊಲೆಗೈದಿರುವ ಘಟನೆ ಚಳ್ಳಕೆರೆ ಪಟ್ಟಣದ ನೂತನ ನಗರಸಭೆಯ ಬಳಿ ನಡೆದಿದೆ.ಮೇಸ್ತ್ರಿ ಚನ್ನಕೃಷ್ಣ (38) ಮೃತ ದುರ್ದೈವಿ. ನಾಗರಾಜ್ ಹಾಗೂ ಚಂದ್ರು ಕೊಲೆಗೈದ ಆರೋಪಿಗಳು. ಚನ್ನಕೃಷ್ಣ ಮೂಲತಃ ಆಂಧ್ರದ ನೆಲ್ಲೂರು ಜಿಲ್ಲೆಯ ದುರ್ಗಂಪಲ್ಲಿ ಗ್ರಾಮದ ನಿವಾಸಿಯಾಗಿದ್ದಾರೆ.ಚಳ್ಳಕೆರೆಯಲ್ಲಿ ನಗರಸಭೆ ಕಟ್ಟಡ ನಿರ್ಮಾಣದಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡಲು ಚನ್ನಕೃಷ್ಣ ಚಳ್ಳಕೆರೆಗೆ ಬಂದಿದ್ದರು. ಹೀಗಾಗಿ ಚನ್ನಕೃಷ್ಣ, ನಾಗರಾಜ್ ಹಾಗೂ ಚಂದ್ರು ನಗರಸಭೆ ಕಟ್ಟಡ ನಿರ್ಮಿಸಲು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ತನ್ನ ಪತ್ನಿ ಜೊತೆ ಮೇಸ್ತ್ರಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ನಾಗರಾಜ್ ಶಂಕಿಸಿದ್ದಾನೆ. ಬಳಿಕ ತನ್ನ ಸ್ನೇಹಿತ ಚಂದ್ರು ಜೊತೆ ಸೇರಿ ನಾಗರಾಜ್, ಮೇಸ್ತ್ರಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.ರಾತ್ರಿ ಚನ್ನಕೃಷ್ಣ ಮಲಗಿದ್ದ ವೇಳೆ ದೊಣ್ಣೆಯಿಂದ ಆತನ ತಲೆಗೆ ಹೊಡೆದು ಇಬ್ಬರು ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಚಳ್ಳಕೆರೆ ಸಿಪಿಐ ತಿಮ್ಮಣ್ಣ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಆರೋಪಿಗಳ ವಿರುದ್ಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೆ ಆರೋಪಿ ನಾಗರಾಜ್ ಅನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


