ಮಂಗಳೂರು: ಉದ್ಯಮಿ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಪುತ್ರಿಯ ಮದುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದ್ಧೂರಿಯಾಗಿ ನಡೆದಿದೆ.ಮಂಗಳೂರು ನಗರ ಹೊರವಲಯದ ಉಳ್ಳಾಲದ ಸಮುದ್ರ ದಂಡೆಯಲ್ಲಿ ಫಾರೂಕ್ ಕಟ್ಟಿಸಿರುವ ನೂತನ ರೆಸಾರ್ಟ್ ಸ್ಯಾಂಡ್ ಬೀಚ್ ನಲ್ಲಿ ಮದುವೆ ಕಾರ್ಯ ನಡೆದಿದೆ. ಕೇರಳದ ಹುಡುಗನ ಜೊತೆಗಿನ ಮದುವೆ ಕಾರ್ಯ ಮೂರು ದಿನ ನಡೆಯಲಿದ್ದು, ಇಂದು ಕೂಡ ಗಣ್ಯರು ಮಂಗಳೂರಿಗೆ ಆಗಮಿಸಲಿದ್ದಾರೆ.ಮದುವೆ ಗಣ್ಯರು ಬರುವ ಕಾರಣ ಮಂಗಳೂರಿನ ಐಷಾರಾಮಿ ಹೋಟೆಲ್ ಗಳನ್ನು ಮೂರು ದಿನಗಳ ಕಾಲ ತಿಂಗಳ ಮೊದಲೇ ಬುಕ್ ಮಾಡಲಾಗಿದೆ. ಸಚಿವ ಯು.ಟಿ. ಖಾದರ್ ಸ್ವ-ಕ್ಷೇತ್ರದಲ್ಲಿ ಫಾರೂಕ್ ಕಟ್ಟಿಸಿರುವ ರೆಸಾರ್ಟ್ ಈಗ ಜನಮನ ಸೆಳೆಯುವಂತಾಗಿದೆ.ಈ ಮದುವೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ, ಜೆಡಿಎಸ್ ವರುಷ್ಠ ದೇವೇಗೌಡ, ಪತ್ನಿ ಚನ್ನಮ್ಮ, ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್, ಸಚಿವ ಎಚ್.ಡಿ. ರೇವಣ್ಣ, ಪುತ್ರ ಪ್ರಜ್ವಲ್ ಮತ್ತು ಸಚಿವ ಬಸವರಾಜ್ ಹೊರಟ್ಟಿ, ಸಚಿವ ಜಮೀರ್ ಅಹ್ಮದ್ ಸೇರಿದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಹಲವು ಮುಖಂಡರು ಪಾಲ್ಗೊಂಡಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


