ಮಂಗಳೂರು: ದೇಶದ ಆರ್ಥಿಕತೆ ಉತ್ತಮಗೊಂಡಿದ್ದರಿಂದ ಕಾಂಗ್ರೆಸ್ ಹತಾಶೆ ವ್ಯಕ್ತಪಡಿಸುತ್ತಿದೆ ಎಂದು ಬಿಜೆಪಿ ಶಾಸಕ ಸಿಟಿ ರವಿ ಹೇಳಿದ್ದಾರೆ.ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಆರ್ಥಿಕತೆ ಉತ್ತಮಗೊಂಡಿದೆ. ಬಿಜೆಪಿಯ ಈ ಸಾಧನೆಯನ್ನು ಸಹಿಸಲು ಆಗದೇ ಕಾಂಗ್ರೆಸ್ ಕೇಂದ್ರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ ಎಂದು ದೂರಿದರು.ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಬೇನಾಮಿ ಉದ್ಯಮಿಗಳಿಗೆ ಸಾಲ ಕೊಟ್ಟಿತ್ತು. ವಿಜಯ್ ಮಲ್ಯ, ನೀರವ್ ಮೋದಿ ಬೇಕಾಬಿಟ್ಟಿ ಸಾಲ ಪಡೆದು ದೇಶ ಬಿಟ್ಟಿದ್ದಾರೆ. 800 ಕೋಟಿ ಆಸ್ತಿ ಮೌಲ್ಯವಿರುವ ವಿಜಯ್ ಮಲ್ಯಗೆ ಆರು ಸಾವಿರ ಕೋಟಿ ಸಾಲ ನೀಡಿತ್ತು. ನೀರವ್ ಮೋದಿಗೆ 12 ಸಾವಿರ ಕೋಟಿ ರೂ. ನೀಡಿದ್ದಲ್ಲಿ ಆಗಿನ ಹಣಕಾಸು ಮಂತ್ರಿಗಳ ಪಾತ್ರ ಏನು ಎಂದು ಪ್ರಶ್ನಿಸಿ ಕಾಂಗ್ರೆಸ್ ವಿರುದ್ಧ ರವಿ ಕಿಡಿಕಾರಿದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


