ಚಾಮರಾಜನಗರ: ಸೆಕ್ಸ್ ಗಾಗಿ ವ್ಯಕ್ತಿಯೊಬ್ಬ ಎರಡು ಮಹಿಳೆಯರ ಬಾಳು ಹಾಳು ಮಾಡಿ ಓರ್ವ ಯುವತಿಯನ್ನು ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ವಡ್ಡರದೊಡ್ಡಿ ಗ್ರಾಮದಲ್ಲಿ ಜರುಗಿದೆ.ವಡ್ಡರದೊಡ್ಡಿ ಗ್ರಾಮದ ತಂಗರಾಜು ಈ ಹಿಂದೆ ತನ್ನ ಕಾಮದ ದಾಹ ತೀರಿಸಿಕೊಳ್ಳಲು ಇಬ್ಬರು ಮಹಿಳೆಯರನ್ನು ಮದುವೆಯಾಗಿ ಮನೆಗೆ ಕರೆ ತಂದು ಹಲವು ವರ್ಷಗಳ ಕಾಲ ಸಂಸಾರ ಮಾಡಿ ನಂತರ ಅವರನ್ನು ಮನೆಯಿಂದ ಓಡಿಸಿದ್ದ. ಇದೀಗ ಕಳೆದ ನಾಲ್ಕೈದು ತಿಂಗಳ ಹಿಂದೆ ಸುಚಿತ್ರ ಎಂಬ ಯುವತಿಯನ್ನು ಆಕೆಯ ಪೋಷಕರಿಗೆ ತಿಳಿಯದ ಹಾಗೆ ಮದುವೆ ಆಗಿ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ.ನಾಲ್ಕೈದು ತಿಂಗಳಿಂದ ಸುಚಿತ್ರ ಜೊತೆಗೆ ಚೆನ್ನಾಗಿ ಸಂಸಾರ ಮಾಡುತ್ತಿದ್ದ ತಂಗರಾಜು, ನಿನ್ನೆ ಸುಚಿತ್ರ ತಲೆಗೆ ರಾಡಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಸುಚಿತ್ರ ಗರ್ಭಿಣಿಯಾಗಿದ್ದು, ಆ ಗರ್ಭವನ್ನು ತೆಗೆಸಲು ತಂಗರಾಜು ಪೀಡಿಸಿದ್ದಾನೆ. ಇದಕ್ಕೆ ಸುಚಿತ್ರ ನಿರಾಕರಿಸಿದ್ದರಿಂದ ಸುಚಿತ್ರಳನ್ನು ಮನೆಯಲ್ಲೆ ಕುಡಿದ ಅಮಲಿನಲ್ಲಿ ಕೊಲೆ ಮಾಡಿದ್ದಾನೆ.ಸುಚಿತ್ರಳಿಗೆ ಗರ್ಭಪಾತ ಮಾಡಿಸಿ ಆಕೆಯನ್ನು ಓಡಿಸಿ ಇನ್ನೊಬ್ಬಳನ್ನು ಮದುವೆಯಾಗೋದು ತಂಗರಾಜು ಪ್ಲಾನ್ ಆಗಿತ್ತು. ಹೀಗಾಗಿ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ತಂಗರಾಜು ಪ್ರತಿ ಬಾರಿಯೂ ತನ್ನ ಮನೆಗೆ ಯಾವುದಾದರು ಒಂದು ಮಹಿಳೆ ಹಾಗೂ ಯುವತಿಯನ್ನು ಕರೆ ತಂದು ಅವರಿಗೆ ಇದೇ ರೀತಿ ಹಿಂಸೆ ನೀಡುತ್ತಿದ್ದ ಗ್ರಾಮಸ್ಥರು ಆರೋಪಿಸಿದ್ದಾರೆ.ಸದ್ಯ ಈ ಕುರಿತು ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಂಗರಾಜುವನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


