ಬೆಂಗಳೂರು: ಆಟೋವನ್ನು ಸ್ಟ್ಯಾಂಡ್‍ಗೆ ಹಾಕು ಅಂತಾ ಹೇಳಿದ್ದ ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದ್ದ ಆರೋಪಿಯನ್ನು ಕೆ.ಆರ್.ಪುರಂ ಪೊಲೀಸರು ಬಂಧಿಸಿದ್ದಾರೆ.ದೇವಸಂದ್ರದ ನಿವಾಸಿ ಜೆ.ಸಿ.ಲೇಜೌಟ್ ನಿವಾಸಿ ಮಹಮ್ಮದ್ ಖಯೂಂ (28) ಬಂಧಿತ ಆರೋಪಿ. ಆಟೋ ಚಾಲಕನಾಗಿರುವ ಮಹಮ್ಮದ್ ಕೆ.ಆರ್.ಪುರ ಸಂಚಾರ ಪೋಲಿಸ್ ಪೇದೆ ರಾಜಸಾಬ್ ಧೋನಿ ಎಂಬವರ ಮೇಲೆ ಹಲ್ಲೆ ಮಾಡಿ, ಪರಾರಿಯಾಗಿದ್ದ. ಆತನಿಗಾಗಿ ಬಲೆ ಬಿಸಿದ್ದ ಪೊಲೀಸರು ಇಂದು ಬಂಧಿಸಿದ್ದಾರೆ.ಏನಿದು ಪ್ರಕರಣ?
ದೇವಸಂದ್ರ ಜೆಂಕ್ಷನ್ ಬಳಿ ಸುಗಮ ಸಂಚಾರ ನಿಯಂತ್ರಣಕ್ಕಾಗಿ ರಾಜಸಾಬ್ ಧೋನಿ ಅವರನ್ನು ನವೆಂಬರ್ 7ರಂದು ನಿಯೋಜನೆ ಮಾಡಲಾಗಿತ್ತು. ಈ ವೇಳೆ ಅಲ್ಲಿಗೆ ಬಂದಿದ್ದ ಮಹಮ್ಮದ್ ಆಟೋವನ್ನು ರಸ್ತೆ ಬದಿಗೆ ನಿಲ್ಲಿಸಿದ್ದ. ಇದನ್ನು ನೋಡಿದ ರಾಜಸಾಬ್ ಧೋನಿ ವಾಹನ ಸಂಚಾರಕ್ಕೆ ತೊಂದರೆ ಆಗುತ್ತದೆ. ಆಟೋವನ್ನು ಸ್ಟ್ಯಾಂಡ್ ನಲ್ಲಿ ನಿಲ್ಲಿಸಿ ಎಂದು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಮಹಮ್ಮದ್ ಆಟೋದಿಂದ ಇಳಿದು ರಾಜಸಾಬ್ ಧೋನಿ ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದನು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


