ಬೆಂಗಳೂರು: ಅಪರಿಚಿತನೊಬ್ಬ ಎರ್ರಾಬಿರ್ರಿ ಕಾರು ಚಲಾಯಿಸಿ ಕೆಲಕಾಲ ಎಲ್ಲರಿಗೂ ಭೀತಿ ಹುಟ್ಟಿಸಿದ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ವ್ಯಾಪ್ತಿಯಲ್ಲಿ ನಡೆದಿದೆ.ಅಪರಿಚಿತ ವ್ಯಕ್ತಿ ಕಾರನ್ನು ಎರ್ರಾಬಿರ್ರಿ ಚಲಾಯಿಸಿ ಮನೆ ಮುಂದೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸುಮಾರು 40 ಕ್ಕೂ ಅಧಿಕ ಕಾರುಗಳಿಗೆ ಡ್ಯಾಮೇಜ್ ಮಾಡಿದ್ದಾನೆ. ಇತನ ಪುಂಡಾಟವನ್ನು ನೋಡಿದ ಸ್ಥಳೀಯರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಕೊನೆಗೂ ಆ ಅಪರಿಚಿತ ವ್ಯಕ್ತಿಯನ್ನು ಸೆರೆ ಹಿಡಿದಿದ್ದಾರೆ.ಲಗ್ಗೆರೆ ರಿಂಗ್ ರೋಡ್ ಬಳಿ ಸ್ಥಳೀಯರು ಅಪರಿಚಿತ ವ್ಯಕ್ತಿಯನ್ನು ಸೆರೆ ಹಿಡಿದಿದ್ದಾರೆ. ಸದ್ಯ ಅಪರಿಚಿತ ವ್ಯಕ್ತಿ ಈಗ ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರ ವಶದಲ್ಲಿ ಇದ್ದಾನೆ. ಕಾರಿನ ಮುಂಬದಿಯ ಎಡ ಭಾಗದ ಟೈರ್ ಇಲ್ಲದೇನೆ ಎರ್ರಾಬಿರ್ರಿ ಕಾರ್ ಚಾಲಯಿಸಿದ್ದಾನೆ. ಕೆಎ 13 ಬಿ 7921 ನಂಬರಿನ ಸ್ವಿಫ್ಟ್ ಡಿಸೈರ್ ಕಾರನ್ನು ಅಪರಿಚಿತ ವ್ಯಕ್ತಿ ಚಲಾಯಿಸುತ್ತಿದ್ದನು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


