ಗದಗ: ಸಿದ್ದರಾಮಯ್ಯ ಭಂಡ ರಾಜಕಾರಣಿ ಎಂದು ಕೆ.ಎಸ್ ಈಶ್ವರಪ್ಪ ಶನಿವಾರ ಟೀಕಿಸಿರುವ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ತೀರುಗೇಟು ನೀಡಿದ್ದಾರೆ.ಸಿದ್ದರಾಮಯ್ಯ ಭಂಡ ರಾಜಕಾರಣಿ, ಸ್ವಯಂ ಘೋಷಿತ ಅಹಿಂದ ನಾಯಕ ಎಂದು ಹೇಳ್ಕೊಂಡು ಓಡಾಡ್ತಾರೆ. ಇಂತವರನ್ನು ನಾನು ಕರ್ನಾಟಕದಲ್ಲಿ ಮೊದಲೆಲ್ಲೂ ನೋಡಿಲ್ಲ ಎಂದು ಈಶ್ವರಪ್ಪ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿ, ಈಶ್ವರಪ್ಪ ಒಬ್ಬ ಮಹಾನ್ ಪೆದ್ದ, ಆತ ಮೆದುಳಿಲ್ಲದ ಮನುಷ್ಯ. ಅಹಿಂದ ಎನ್ನುವುದಕ್ಕೆ ಯಾವುದಾದರು ಯುನಿವರ್ಸಿಟಿ ಸರ್ಟಿಫಿಕೇಟ್ ಕೊಟ್ಟಿದಿಯಾ? ಎಂದು ತಿರುಗೇಟು ನೀಡಿದ್ದಾರೆ.ಆ ಬಳಿಕ ಬಿಜೆಪಿ ವರ್ಚಸ್ ಕಡಿಮೆ ಮಾಡಲು ಕಾಂಗ್ರೆಸ್ ತಂತ್ರ ಮಾಡುತ್ತಿದೆ ಎಂಬ ಜನಾರ್ದನ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯರವರು, ಜನಾರ್ದನ ರೆಡ್ಡಿ ಬಿಜೆಪಿಯಲ್ಲೇ ಇಲ್ಲ, ಯಾಕೆಂದ್ರೆ ಅವರು ಜನಾರ್ದನ ರೆಡ್ಡಿಗೂ ಬಿಜೆಪಿಗೆ ಸಂಬಂಧವಿಲ್ಲ ಅಂತಾ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿಯಲ್ಲೇ ಇಲ್ಲ ಅಂದ್ಮೇಲೆ ಬಿಜೆಪಿ ಮಾತು ರೆಡ್ಡಿಗ್ಯಾಕೆ? ಎಂದು ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ ಸಚಿವ ಸಂಪುಟದ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತೇವೆ. ನಂತರ ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


