ಮೈಸೂರು: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತ ಕುಮಾರ್ ಅವರು ನೀಡುತ್ತಿದ್ದ ಸಿಹಿಸುದ್ದಿಯನ್ನು ನೆನಪಿಸಿಕೊಂಡು ಮೈಸೂರಿನ ಸಂಸದ ಪ್ರತಾಪ್ ಸಿಂಹ ಕಂಬನಿ ಮಿಡಿದಿದ್ದಾರೆ.“ಪ್ರತಾಪಾ… ಪಾಸ್ಪೋರ್ಟ್ ಸೇವಾ ಕೇಂದ್ರ ಅಪ್ರೂವ್ ಮಾಡ್ಸಿದೀನಿ, ಮೈಸೂರು-ಬೆಂಗಳೂರು ಹೈವೇನ ಮೋದಿಜಿ ನಾಳೆ ಮಹಾರಾಜಾ ಗ್ರೌಂಡ್ ನಲ್ಲಿ ಘೋಷಣೆ ಮಾಡ್ತಾರೆ, ಏರ್ ಪೋರ್ಟ್ ಗೆ ಮರುಜೀವ ಕೊಡೋದಕ್ಕೆ ಜಯಂತ್ ಸಿನ್ಹಾಗೆ ಸೂಚಿಸಿದ್ದೇನೆ ಅಂತ ಸದಾ ಸಿಹಿ ಸುದ್ದಿ ಕೊಡುತ್ತಿದ್ದ ಆ ಧ್ವನಿಯನ್ನೇ ಕಿತ್ತುಕೊಂಡನಲ್ಲಾ ದೇವರೇ” ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ, ಕರ್ನಾಟಕ ಬಿಜೆಪಿಯ ಹಿರಿಯ ಮುಖಂಡ ಎಚ್.ಎನ್. ಅನಂತಕುಮಾರ್ (59) ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತಕುಮಾರ್ ಅವರು ಸೋಮವಾರ ನಸುಕಿನ ಜಾವ ಎರಡು ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಇತ್ತೀಚೆಗೆ ತೀವ್ರ ಅನಾರೋಗ್ಯಪೀಡಿತರಾಗಿದ್ದ ಅನಂತಕುಮಾರ್ ಅವರನ್ನು ಕಳೆದ ಎರಡು ದಿನಗಳಿಂದ ವೆಂಟಿಲೇಟರ್‍ನಲ್ಲಿ ಇಡಲಾಗಿತ್ತು. ಅನಂತಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.ಪ್ರತಾಪಾ… ಪಾಸ್ಪೋರ್ಟ್ ಸೇವಾ ಕೇಂದ್ರ ಅಪ್ರೂವ್ ಮಾಡ್ಸಿದೀನಿ, ಮೈಸೂರು-ಬೆಂಗಳೂರು ಹೈವೇನ ಮೋದಿಜಿ ನಾಳೆ ಮಹಾರಾಜಾ ಗ್ರೌಂಡ್ ನಲ್ಲಿ ಘೋಷಣೆ ಮಾಡ್ತಾರೆ, ಏರ್ಪೋರ್ಟ್ಗೆ ಮರುಜೀವ ಕೊಡೋದಕ್ಕೆ ಜಯಂತ್ ಸಿನ್ಹಾಗೆ ಸೂಚಿಸಿದ್ದೇನೆ ಅಂತ ಸದಾ ಸಿಹಿ ಸುದ್ದಿ ಕೊಡುತ್ತಿದ್ದ ಆ ಧ್ವನಿಯನ್ನೇ ಕಿತ್ತುಕೊಂಡಲ್ಲಾ ದೇವರೇ.. pic.twitter.com/Wfsdpda1kY— Pratap Simha (@mepratap) November 12, 2018ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


