ಬೆಂಗಳೂರು: ಮನಸ್ಸು, ಹೃದಯ ತುಂಬಾ ಭಾರವಾಗಿದೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅನಂತ ಕುಮಾರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.ಮನಸ್ಸು , ಹೃದಯ ತುಂಬಾ ಭಾರವಾಗಿದೆ.ಪ್ರೀತಿಯ ಸ್ನೇಹಿತ , ಸಹೋದರ , ಅನಂತಕುಮಾರ್ ಇನ್ನಿಲ್ಲವೆಂಬ ಸತ್ಯ ಎಷ್ಟೊಂದು ಕಠೋರ ಎಂದು ಬರೆದು ಡಿವಿಎಸ್ ಟ್ವೀಟ್ ಮಾಡಿದ್ದಾರೆ. ಮನಸ್ಸು , ಹೃದಯ ತುಂಬಾ ಭಾರವಾಗಿದೆ . ಪ್ರೀತಿಯ ಸ್ನೇಹಿತ , ಸಹೋದರ , ಅನಂತಕುಮಾರ್ ಇನ್ನಿಲ್ಲವೆಂಬ ಸತ್ಯ ಎಷ್ಟೊಂದು ಕಠೋರ . pic.twitter.com/xE0F0AlmN6— Sadananda Gowda (@DVSadanandGowda) November 12, 2018ಟ್ವೀಟ್ ಮಾಡುವುದರ ಜೊತೆಗೆ ಡಿವಿಎಸ್ ಫೇಸ್ ಬುಕ್ ಮತ್ತು ಟ್ವಿಟ್ಟರ್ ಖಾತೆ ಪ್ರೊಫೈಲ್ ಕಪ್ಪು ಬಣ್ಣದ ಫೋಟೋವನ್ನು ಹಾಕಿದ್ದಾರೆ.ನನ್ನ 32 ವರ್ಷದ ರಾಜಕೀಯ ಕ್ಷೇತ್ರದಲ್ಲಿನ ಗೆಳೆಯ ಅನಂತ ಕುಮಾರ್ ಇನ್ನಿಲ್ಲ ಎಂದು ಇದೀಗ ತಿಳಿದು ಈ ಬೆಳಗ್ಗಿನ ಜಾವ ತೀವ್ರ ಆಘಾತವಾಗಿದೆ. ಅನಂತ್ ಇಲ್ಲದ ಬಿಜೆಪಿಯನ್ನು ಊಹಿಸಲಿಕ್ಕೂ ಆಗುವುದಿಲ್ಲ ಎಂದು ಬಿಜೆಪಿ ಮುಖಂಡ, ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. Shocked , it’s unbelievable , My friend , Brother Ananthkumar is no more . pic.twitter.com/zMOYEn7gXc— Sadananda Gowda (@DVSadanandGowda) November 12, 2018 ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತಕುಮಾರ್ ಅವರು ಸೋಮವಾರ ನಸುಕಿನ ಜಾವ ಎರಡು ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇತ್ತೀಚೆಗೆ ತೀವ್ರ ಅನಾರೋಗ್ಯಪೀಡಿತರಾಗಿದ್ದ ಅನಂತಕುಮಾರ್ ಅವರನ್ನು ಕಳೆದ ಎರಡು ದಿನಗಳಿಂದ ವೆಂಟಿಲೇಟರ್ನಲ್ಲಿ ಇಡಲಾಗಿತ್ತು. ಅನಂತಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.ಇಂದು ಬೆಳಗ್ಗೆ ಪ್ರಧಾನಿ ಮೋದಿ ಬೆಂಗಳೂರಿಗೆ ಬರಲಿದ್ದಾರೆ.  ನಾಳೆ  ಬೆಳಗ್ಗೆ  ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.ನನ್ನ 32 ವರ್ಷದ ರಾಜಕೀಯ ಕ್ಷೇತ್ರದಲ್ಲಿನ ಗೆಳೆಯ ಅನಂತ ಕುಮಾರ್ ಇನ್ನಿಲ್ಲ ಎಂದು ಇದೀಗ ತಿಳಿದು‌ ಈ ಬೆಳಗ್ಗಿನ ಜಾವ ತೀವ್ರ ಆಘಾತವಾಗಿದೆ.‌ ಅನಂತ್ ಇಲ್ಲದ ಬಿಜೆಪಿಯನ್ನು ಊಹಿಸಲಿಕ್ಕೂ ಆಗುವುದಿಲ್ಲ. pic.twitter.com/IjfI20mGRR— S.Suresh Kumar (@nimmasuresh) November 12, 2018ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


