ವಿಜಯಪುರ: ಜಿಲ್ಲೆ ನಿಡಗುಂದಿ ತಾಲೂಕಿನ ಯಲಗೂರು ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಇದೀಗ ಈ ಶಂಕೆ ನಿಜಾಂಸ ಬಯಲಾಗಿದ್ದು, ಹೆತ್ತ ತಾಯಿಯೇ ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ.ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕ್ಯಾದಿಗೇರಾ ಗ್ರಾಮದ ರೇಣುಕಾ, ಸಿರವಾರ ಗ್ರಾಮದ ಶಂಕರನನ್ನು ಪ್ರೀತಿಸಿ ಮದುವೆ ಆಗಿ ಯಲಗೂರಿನಲ್ಲಿ ವಾಸವಾಗಿದ್ದರು. 2 ವರ್ಷ ಸಂಸಾರ ನಡೆಸಿದ್ದ ರೇಣುಕಾ ನ.6ರಂದು ಸಂಜೆ ಮನೆಯಲ್ಲೇ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.ಅನ್ಯಜಾತಿಯ ಯುವಕನನ್ನು ಮದುವೆಯಾಗಿ ಊರು ಬಿಟ್ಟು ಓಡಿ ಬಂದು ಮನೆತನದ ಮಾನ, ಮರ್ಯಾದೆ ಹಾಳು ಮಾಡಿದ್ದಾಳೆಂದು ಹೆತ್ತ ಮಗಳ ಕತ್ತು ಸೀಳಿ ತಾಯಿ ಶಿವಲಿಂಗಮ್ಮ ಕೊಲೆಗೈದಿದ್ದಾಳೆ. ಮಗಳನ್ನು ಕೊಲೆ ಮಾಡಲು ತನ್ನೂರಿನಿಂದ ಕೈ ಚೀಲದಲ್ಲಿ ಚಾಕು ತಂದಿದ್ದ ಶಿವಲಿಂಗಮ್ಮ ತನ್ನ ಮಗ, ಅಳಿಯನನ್ನು ಕರೆಯಿಸಿಕೊಂಡಿದ್ದಾಳೆ.ಕೊಲೆ ವೇಳೆ ಸಹೋದರ ಮಲ್ಲಿಕಾರ್ಜುನ ರೇಣುಕಾಳ ಕಾಲು ಹಿಡಿದಿರೆ, ತಂಗಿ ಗಂಡ ರಮೇಶ್ ಕೈಗಳನ್ನು ಹಿಡಿದಿದ್ದಾನೆ. ಬಳಿಕ ತಾನು ತಂದಿದ್ದ ಚಾಕುವಿನಿಂದ ಮಗಳ ಕತ್ತು ಸೀಳಿ ಶಿವಲಿಂಗಮ್ಮ ಮಗಳ ಹತ್ಯೆ ಮಾಡಿದ್ದಾಳೆ.ಪೊಲೀಸರ ತನಿಖೆ ವೇಳೆ ಎಲ್ಲ ಸಂಗತಿಗಳು ಬಯಲಾಗಿದ್ದು, ಇದೊಂದು ಮರ್ಯಾದಾ ಹತ್ಯೆ ಎಂದು ದೃಢಪಟ್ಟಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ನಿಡಗುಂದಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnewsSign in to your account
Username or Email Address


Password

 Remember Me


