ಕಾರವಾರ: ಕುಟುಂಬದ ಜೊತೆಗೆ ಪ್ರವಾಸಕ್ಕೆಂದು ಬಂದು ಸಮುದ್ರದಲ್ಲಿ ಈಜಲು ಹೋಗಿ ಇಬ್ಬರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮುಖ್ಯ ಕಡಲ ತೀರದಲ್ಲಿ ನಡೆದಿದೆ.ಅಂಕೋಲಾ ತಾಲೂಕಿನ ಜಮಗೋಡು ಗ್ರಾಮದ ಪ್ರಮೋದ್ ನಾಯಕ (51) ಹಾಗೂ ಅಮೋಘ ನಾಯಕ (25) ಮೃತ ದುರ್ದೈವಿಗಳು. ಇವರೊಂದಿಗೆ ಸಮುದ್ರಕ್ಕೆ ಇಳಿದಿದ್ದ ಸಂಪತ್ ಮತ್ತು ಸಂಗಮ್ ಎಂಬವರನ್ನು ರಕ್ಷಣೆ ಮಾಡಿ, ಗೋಕರ್ಣ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.ಆಗಿದ್ದೇನು?:
ದೀಪಾವಳಿ ಹಬ್ಬ ನಿಮಿತ್ತ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಹಾಗೂ ಪ್ರವಾಸಕ್ಕೆ ಅಂತಾ ಪ್ರಮೋದ್ ನಾಯಕ್ ಹಾಗೂ ಕುಟುಂಬದ ಐವರು ಬಂದಿದ್ದರು. ಈ ವೇಳೆ ಸಮುದ್ರಕ್ಕೆ ಇಳಿದಿದ್ದ ನಾಲ್ವರು ಸಮುದ್ರದ ಸುಳಿಗೆ ಸಿಲುಕಿದ್ದಾರೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚೀರುತ್ತಿದ್ದ ಧ್ವನಿ ಕೇಳಿಸಿಕೊಂಡ ಸ್ಥಳೀಯರು ಹಾಗೂ ಕಡಲ ರಕ್ಷಣಾ ಸಿಬ್ಬಂದಿ ಸಹಾಯದಿಂದ ಮತ್ತಿಬ್ಬರನ್ನ ರಕ್ಷಣೆ ಮಾಡಿದ್ದಾರೆ. ಮೃತ ದೇಹವನ್ನು ಹೊರಗೆ ತೆಗೆಯಲಾಗಿದ್ದು, ಬದುಕುಳಿದದ್ದ ಸಂಪತ್ ಮತ್ತು ಸಂಗಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


