ಬೆಂಗಳೂರು: ಭಾರೀ ಸ್ಫೊಟಕವುಳ್ಳ ಪಟಾಕಿ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಮೇಲ್ಚಾವಣಿಯ ಶೀಟ್ ಸೇರಿ ಮನೆಯೊಳಗೊದ್ದ ಸೋಫಾ ಹಾಗೂ ಪೀಠೋಪಕರಣಗಳು ಸುಟ್ಟು ಕರಕಲಾದ ಘಟನೆ ವರ್ತೂರು ಬಳಿಯ ಪಣತ್ತೂರಿನಲ್ಲಿ ನಡೆದಿದೆ.ಇಲ್ಲಿನ ನಿವಾಸಿ ವೆಂಕಟೇಶ್ ಎಂಬವರು ರಾತ್ರಿ ಮನೆಯವರ ಜೊತೆ ಊಟ ಮುಗಿಸಿ ಮನೆಯ ಆವರಣದಲ್ಲಿ ಕುಳಿತಿದ್ದರು. ಈ ವೇಳೆ ಏಕಾಏಕಿ ಭಾರೀ ಸ್ಫೋಟಕ ಸಾಂದ್ರತೆಯುಳ್ಳ ಪಟಾಕಿಯು ಮನೆ ಶೀಟ್ ನಿಂದ ಒಳಬಿದ್ದಿದೆ. ಈ ವೇಳೆ ಮನೆಯೊಳಗಿದ್ದ ವೆಂಕಟೇಶ್ ರ ತಾಯಿ ರಾಜಮ್ಮ ಹಾಗೂ ಪುತ್ರ ಮೋನಿತ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಗಾಯಗೊಂಡ ಇಬ್ಬರಿಗೂ ಚಿಕಿತ್ಸೆ ಕೊಡಿಸಲಾಗಿದೆ.ಈ ಘಟನೆ ನಡೆದ ವೇಳೆ ಏರಿಯಾದಲ್ಲಿ ವಿದ್ಯುತ್ ಕೂಡ ಕೈ ಕೊಟ್ಟಿತ್ತು ಇದೇ ವೇಳೆ ಕಿಡಿಗೇಡಿಗಳು ತಮ್ಮ ಮನೆಮೇಲೆ ಸ್ಪೊಟಕ ರೀತಿಯ ಪಟಾಕಿ ಎಸೆದಿರಬಹುದೆಂದು ಆರೋಪಿಸಿ ಮನೆ ಮಾಲೀಕ ವೆಂಕಟೇಶ್ ಮಾರತ್ತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


