ಬೆಂಗಳೂರು: ಉಪ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದ್ದು, ಇದೀಗ ಮಾಜಿ ಸಚಿವ ಜನಾರ್ದನ ರೆಡ್ಡಿ ಗ್ಯಾಂಗ್ ಮಟ್ಟ ಹಾಕಲು ಬೆಂಗಳೂರು ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಸಿಎಂ ಸೂಚನೆ ನೀಡಿದ್ದಾರೆ.ಸಮ್ಮಿಶ್ರ ಸರ್ಕಾರ ಬೀಳಿಸುವ ಸುಪಾರಿ ಕೊಟ್ಟಿದ್ದೇ ರೆಡ್ಡಿಗೆ ಎಂದು ಹೇಳಲಾಗುತ್ತಿದೆ. ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸುತ್ತೇನೆ. ಆಪರೇಷನ್ ಕಮಲಕ್ಕೆ ಎಷ್ಟು ಕೋಟಿ ರೂ, ಸುರಿಯಲೂ ನಾನು ರೆಡಿ ಅಂತ ಬಿಜೆಪಿ ನಾಯಕರ ಮುಂದೆ ರೆಡ್ಡಿ ಹೇಳಿದ್ದರು. ರೆಡ್ಡಿ ಮಾತು ನಂಬಿ ಆಪರೇಷನ್ ಕಮಲಕ್ಕೆ ಬಿಜೆಪಿ ಕೈ ಹಾಕಿತ್ತು ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದನ್ನೂ ಓದಿ: ಜನಾರ್ದನ ರೆಡ್ಡಿಯ ಮೂವರು ಆಪ್ತರು ಸಿಸಿಬಿ ವಶಕ್ಕೆಜೆಡಿಎಸ್ ಶಾಸಕರನ್ನು ಕೋಟಿ ಕೋಟಿ ರೂಪಾಯಿ ಖರೀದಿಸಲು ರೆಡ್ಡಿ ಹುನ್ನಾರ ಹೂಡಿದ್ದರು. ಹೀಗಾಗಿ ಜೆಡಿಎಸ್ ನಿಂದ ಜಂಪ್ ಮಾಡುವ ಶಾಸಕರಿಗೆ ಬರೋಬ್ಬರಿ 25-30 ಕೋಟಿ ಆಫರ್ ನೀಡಲಾಗಿತ್ತು. ಈ ಹಣವನ್ನೆಲ್ಲಾ ಹೊಂದಿಸಲು ರೆಡ್ಡಿ ಒಪ್ಪಿಕೊಂಡಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಸುಳಿವು ಪಡೆದಿದ್ದರು. ಇದನ್ನೂ ಓದಿ: ರಾತ್ರೋರಾತ್ರಿ ಬಿಜೆಪಿ ನಾಯಕರಿಂದ ಕೋಟಿ ರೂ. ಆಮಿಷ – ಫಲಿತಾಂಶದ ಬೆನ್ನಲ್ಲೇ ಸಿಎಂ ಹೊಸ ಬಾಂಬ್ಆಪರೇಷನ್ ಕಮಲ ಮೂಲಕ ರೆಡ್ಡಿ ಕುತಂತ್ರದ ಹಿನ್ನೆಲೆಯಲ್ಲಿ ಇದೀಗ ಕಾರ್ಯಾಚರಣೆ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ರೆಡ್ಡಿ ಗ್ಯಾಂಗ್ ಮಟ್ಟ ಹಾಕಲು ಬೆಂಗಳೂರು ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


