ಬೆಂಗಳೂರು: ನಟ ದುನಿಯಾ ವಿಜಿಗೆ ಜೈಲಿಗೆ ಹೋಗಿ ಬಂದ್ರೂ ಪೊಲೀಸ್ ವಿಚಾರಣೆಯ ಬಿಸಿ ಮಾತ್ರ ಕಡಿಮೆ ಆಗಿಲ್ಲ. ದುನಿಯಾ ವಿಜಿ ಮೇಲೆ ಗಿರಿ ನಗರ ಪೊಲೀಸರು ಹಾಕಿರುವ ಸಿಆರ್‌ಪಿಸಿ ಸೆಕ್ಷನ್ 107 ಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ದುನಿಯಾ ವಿಜಿಗೆ ನೋಟಿಸ್ ನೀಡಲಾಗಿದೆ. ಹೀಗಾಗಿ ವಿಜಯ್ ಇಂದು ದಕ್ಷಿಣ ವಿಭಾಗದ ಡಿಸಿಪಿ ಎದುರು ಹಾಜರಾಗಿ ಬಾಂಡ್ ನೀಡಿ ಹೇಳಿಕೆ ಕೊಡಬೇಕು.ನಟ ದುನಿಯಾ ವಿಜಿ ಕುಟುಂಬ ಹಾಗೂ ಹೊರಗಡೆ ಪದೇ ಪದೇ ಪ್ರಕರಣಗಳು ದಾಖಲಾಗುತ್ತಿದ್ದ ಹಿನ್ನೆಲೆಯಲ್ಲಿ ಗಿರಿ ನಗರ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 107 ಹಾಕಿದ್ದರು. ಹೀಗಾಗಿ ಇಂದು ಪೊಲೀಸರ ಮುಂದೆ ಹಾಜರಾಗಬೇಕಿದೆ.ದುನಿಯಾ ವಿಜಿ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಸಂಬಂಧ ಈಗಾಗಲೇ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವ ನಾಗರತ್ನ ಸದ್ಯಕ್ಕೆ ರಿಲ್ಯಾಕ್ಸ್ ಆಗುವ ಹಾಗಿಲ್ಲ. ಯಾಕಂದ್ರೆ ನಾಗರತ್ನ ಮೇಲೆ ಕೂಡ ಗಿರಿನಗರ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 107 ಹಾಕಿದ್ದಾರೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ನಾಗರತ್ನ ಕೂಡ ದಕ್ಷಿಣ ವಿಭಾಗದ ಡಿಸಿಪಿ ಎದಿರು ಹಾಜರಾಗಿ ಬಾಂಡ್ ನೀಡಿ ಮುಚ್ಚಳಿಕೆ ಬರೆದು ಕೊಡಬೇಕು. ಇಷ್ಟು ದಿನ ನಾಪತ್ತೆಯಾಗಿದ್ದ ನಾಗರತ್ನಗೆ ಮಧ್ಯಂತರ ಜಾಮೀನು ಸಿಕ್ಕಿರುವುದರಿಂದ ಶೀಘ್ರದಲ್ಲೇ ಪೊಲೀಸರು ಅವರನ್ನು ಡಿಸಿಪಿ ಎದುರು ಹಾಜರಾಗಲು ನೋಟೀಸ್ ನೀಡಲಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


