ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ಖ್ಯಾತ ನಿರ್ದೇಶಕ ಪವನ್ ಒಡೆಯರ್ ವಿಶೇಷವಾದ ಉಡುಗೊರೆ ನೀಡಿದ್ದಾರೆ.ಪುನೀತ್ ನಟನೆಯ ‘ನಟಸಾರ್ವಭೌಮ’ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಪವನ್ ತಮ್ಮ ಟ್ವಿಟ್ಟರಿನಲ್ಲಿ, “ಕನ್ನಡ ಚಿತ್ರರಂಗದ ಅನ್ನದಾತರಾದ ನಮ್ಮ ಇಷ್ಟ ದೈವಗಳಾದ ಅಭಿಮಾನಿ ದೇವರುಗಳಿಗೆ ನನ್ನ ಸಿನಿಮಾ ನಟಸಾರ್ವಭೌಮ ಚಿತ್ರದ ಹೊಚ್ಚ ಹೊಸ ದೀಪಾವಳಿ ಹಬ್ಬದ ವಿಶೇಷ ಪೋಸ್ಟರ್ ಗಳು ನಿಮ್ಮ ಸನ್ನಿಧಾನಕ್ಕೆ” ಎಂದು ಬರೆದು ನಟಸಾರ್ವಭೌಮದ ಪೋಸ್ಟರ್ ಗಳನ್ನು ಹಾಕಿ ಟ್ವೀಟ್ ಮಾಡಿದ್ದಾರೆ.ಕನ್ನಡ ಚಿತ್ರರಂಗದ ಅನ್ನದಾತರಾದ ನಮ್ಮ ಇಷ್ಟ ದೈವಗಳಾದ ಅಭಿಮಾನಿ ದೇವರುಗಳಿಗೆ ನನ್ನ ಸಿನಿಮಾ ನಟಸಾರ್ವಭೌಮ ಚಿತ್ರದ ಹೊಚ್ಚ ಹೊಸ ದೀಪಾವಳಿ ಹಬ್ಬದ ವಿಶೇಷ ಪೋಸ್ಟರ್ಗಳು ನಿಮ್ಮ ಸನ್ನಿಧಾನಕ್ಕೆ ????????????????#HappyDeepavali #Natasaarvabhowma @PuneethRajkumar @anupamahere @immancomposer pic.twitter.com/wm36qzQCEc— Pavan Wadeyar (@PavanWadeyar) November 6, 2018ಪವನ್ ಒಡೆಯರ್ ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭಮ ಚಿತ್ರದ ಎರಡು ಪೋಸ್ಟರ್ ಗಳನ್ನು ಟ್ವಿಟ್ಟರಿನಲ್ಲಿ ಹಾಕುವುದರ ಮೂಲಕ ಅಭಿಮಾನಿಗಳಿಗೆ ದೀಪಾವಳಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಪವನ್ ಮತ್ತೊಂದು ಟ್ವೀಟ್‍ನಲ್ಲಿ ತಮ್ಮ ಪತ್ನಿ ಅಪೇಕ್ಷಾ ಜೊತೆಗಿರುವ ಫೋಟೋವನ್ನು ಹಾಕಿದ್ದಾರೆ.ನಟಸಾರ್ವಭೌಮ ಚಿತ್ರವನ್ನು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಪವನ್ ಒಡೆಯರ್, ಪುನೀತ್ ರಾಜ್‍ಕುಮಾರ್ ಅವರ `ರಣವಿಕ್ರಮ’ ಚಿತ್ರವನ್ನು ನಿರ್ದೇಶಿಸಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


