ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ದೀಪಾವಳಿ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಉಡುಗೊರೆ ನೀಡಲು ನಿರ್ಧಾರ ಮಾಡಿದ್ದಾರೆ.ನಟ ದರ್ಶನ್ ಅವರ 53ನೇ ಸಿನಿಮಾದ ಶೂಟಿಂಗ್ ಕೆಲಸಗಳು ನಡೆಯುತ್ತಿದ್ದು, ಈ ಮಧ್ಯೆ ಸಿನಿಮಾ ತಂಡ ಸಿನಿಮಾದ ಥೀಮ್ ಪೋಸ್ಟರ್ ಬಿಡುಗಡೆ ಮಾಡಲು ಚಿಂತನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಅವರು ಟ್ವೀಟ್ ಮಾಡುವ ಮೂಲಕ ಸ್ವತಃ ದೀಪಾವಳಿ ಪ್ರಯುಕ್ತ ಸಿನಿಮಾ ಥೀಮ್ ಪೋಸ್ಟರ್ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.ದರ್ಶನ್ ಅವರು, “ದೀಪಾವಳಿ ಹಬ್ಬದ ಪ್ರಯುಕ್ತ ಸಂಜೆ 6 ಗಂಟೆಗೆ ನನ್ನ ಟ್ವಿಟ್ಟರ್/ಫೇಸ್ ಬುಕ್ ಖಾತೆಯಲ್ಲಿ #D53 ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಲಿದ್ದೇನೆ. ನಿಮ್ಮ ಪ್ರೀತಿ-ಅಭಿಮಾನಕ್ಕಾಗಿ ನಾ ಸದಾ ಚಿರಋಣಿ – ನಿಮ್ಮ ದಾಸ ದರ್ಶನ್” ಎಂದು ಬರೆದು ಟ್ವೀಟ್ ಮಾಡಿದ್ದಾರೆ.ದರ್ಶನ್ ಟ್ವೀಟ್ ಮಾಡಿದ ತಕ್ಷಣ ಅಭಿಮಾನಿಗಳು ಕಾಯುತ್ತಿದ್ದೇವೆ ಬಾಸ್ ಎಂದು ರೀಟ್ವೀಟ್ ಮಾಡುತ್ತಿದ್ದಾರೆ. ಇತ್ತೀಚೆಗೆಷ್ಟೆ ದರ್ಶನ್ ಅವರು ತಮ್ಮ ಮಗ ವಿನೀಶ್ ಬರ್ತ್ ಡೇ ಪಾರ್ಟಿ ಯನ್ನು ಅದ್ಧೂರಿಯಾಗಿ ಆಚರಿಸಿದ್ದರು. ಬರ್ತ್ ಡೇ ಪಾರ್ಟಿಗೆ ಸಂಬಂಧಿಕರು ಮತ್ತು ಸಿನಿಮಾ ರಂಗದ ಸ್ನೇಹತರೆಲ್ಲರೂ ಬಂದು ಪಾಲ್ಗೊಂಡಿದ್ದರು.ಮಗ ವಿನೀಶ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ಸಂತಸದಿಂದ ಇದ್ದರು. ಪಾರ್ಟಿಗೆ ಬಂದಿದ್ದ ಅತಿಥಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಪಾರ್ಟಿಯಲ್ಲಿ ಅಚ್ಚರಿ ಎಂದು ದರ್ಶನ್ ಅವರಿಗೆ ಅಪಘಾತ ನಂತರ ಚಿಕಿತ್ಸೆ ಮಾಡಿ ಬ್ಯಾಂಡೇಜ್ ಹಾಕಿದ್ದರು. ಆದರೆ ಪಾಟಿಯಲ್ಲಿ ಬ್ಯಾಂಡೇಜ್ ತೆಗೆದು ನಾರ್ಮಲ್ ಆಗಿ ಇದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvದೀಪಾವಳಿ ಹಬ್ಬದ ಪ್ರಯುಕ್ತ ನಾಳೆ ಸಂಜೆ 6 ಗಂಟೆಗೆ ನನ್ನ ಟ್ವಿಟ್ಟರ್/ಫೇಸ್ ಬುಕ್ ಖಾತೆಯಲ್ಲಿ #D53 ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಲಿದ್ದೇನೆ. ನಿಮ್ಮ ಪ್ರೀತಿ-ಅಭಿಮಾನಕ್ಕಾಗಿ ನಾ ಸದಾ ಚಿರಋಣಿ ????– ನಿಮ್ಮ ದಾಸ ದರ್ಶನ್ #D53ThemePoster— Darshan Thoogudeepa (@dasadarshan) November 5, 2018Sign in to your account
Username or Email Address


Password

 Remember Me


