ಬೆಂಗಳೂರು: ಸಿಎಂ ಕುಮಾರಸ್ವಾಮಿ ಆಡಳಿತ ವಹಿಸಿಕೊಂಡ ಬಳಿಕ ಮಾಡಿದ ರೈತ ಸಾಲಮನ್ನಾ ಫಲವಾಗಿ ಜನ ಉಪಚುನಾವಣೆಯಲ್ಲಿ ಆಶೀರ್ವಾದ ಮಾಡಿದ್ದು, ಇದನ್ನ ನೋಡಿಯಾದರೂ ಕೇಂದ್ರದಲ್ಲಿ ಅಧಿಕಾರಲ್ಲಿರುವ ಬಿಜೆಪಿ ಎಚ್ಚೆತ್ತುಕೊಂಡು ಜನರ ಪರವಾಗಿ ಕೆಲಸ ಮಾಡಬೇಕಿದೆ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಹೇಳಿದ್ದಾರೆ.ಮೈತ್ರಿ ಅಭ್ಯರ್ಥಿಗಳ ಗೆಲುವಿನ ಹಿನ್ನೆಲೆಯಲ್ಲಿ ದೇವಾಲಯ ಪೂಜೆ ಮುಗಿಸಿ ರೇವಣ್ಣ ಅವರು ದೇವೇಗೌಡರ ನಿವಾಸಕ್ಕೆ ಆಗಮಿಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಕಾರಣರಾದ ಜನತೆಗೆ ಧನ್ಯವಾದ. ಎಲ್ಲಾ ಕ್ಷೇತ್ರದಲ್ಲೂ ಜನರು ಆಶೀರ್ವಾದ ಮಾಡಿದ್ದಾರೆ. ಆದರೆ ಶಿವಮೊಗ್ಗದಲ್ಲಿ ಹಣ ಬಲ ಕೆಲಸ ಮಾಡಿದಂತೆ ಕಂಡಿದೆ. ಬಳ್ಳಾರಿ ಫಲಿತಾಂಶ ಉತ್ತಮ ಎನ್ನಿಸಿದೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಸಿಎಂ ಕುಮಾರಸ್ವಾಮಿ ಅವರು ಮಾಡಿದ ಒಳ್ಳೆ ಆಡಳಿತವೇ ಕಾರಣ. 2019 ಚುನಾವಣೆ ಉದ್ದೇಶಕ್ಕಾದರೂ ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಕೇಂದ್ರ ಸರ್ಕಾರಕ್ಕೆ ನೆರವು ನೀಡುವಂತೆ ಮನವೊಲಿಕೆ ಮಾಡಬೇಕು ಎಂದು ಸಲಹೆ ನೀಡಿದರು.ಬೆಂಗಳೂರಿನ ಪದ್ಮನಾಭನಗರ ದೇವೇಗೌಡ ನಿವಾಸಕ್ಕೆ ಭೇಟಿ ನೀಡಿದ ಸಚಿವ ರೇವಣ್ಣ ಅವರು ಚುನಾವಣೆ ಫಲಿತಾಂಶದ ಕುರಿತು ಮಹತ್ವದ ಚರ್ಚೆ ನಡೆಸಿದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


