ಬಳ್ಳಾರಿ/ಶಿವಮೊಗ್ಗ: ಬಳ್ಳಾರಿ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭಕ್ಕೂ ಮುನ್ನವೇ ಚುನಾವಣಾ ಅಭ್ಯರ್ಥಿಗಳು ದೇವರ ಮೊರೆ ಹೋಗುತ್ತಿದ್ದಾರೆ ಶಾಸಕ ಶ್ರೀರಾಮುಲು ಅವರಿಗೆ ಬಳ್ಳಾರಿ ಪ್ರತಿಷ್ಠೆಯ ಕಣವಾಗಿದ್ದು, ಅಭ್ಯರ್ಥಿ ಹಾಗು ಸೋದರಿ ಜೆ.ಶಾಂತಾರ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ.ಬಳ್ಳಾರಿಯಲ್ಲಿ ಮೊದಲು ಅಂಚೆ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ ಅಭ್ಯರ್ಥಿ ಹಾಗೂ ಸಹೋದರಿ ಶಾಂತಾ ಅವರ ಗೆಲುವಿಗಾಗಿ ಅಹಂಭಾವಿ ನಿವಾಸದಲ್ಲಿ ಶಾಸಕ ಶ್ರೀರಾಮುಲು ಅವರು ಪೂಜೆ ನಡೆಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಶ್ರೀರಾಮಲು ಅವರು ತಮ್ಮ ಗೆಲುವಿಗಾಗಿ ಪೂಜೆಯಲ್ಲಿ ನಿರತರಾಗಿದ್ದರು.ಇತ್ತ ಶಿವಮೊಗ್ಗ ಉಪಚುನಾವಣೆ ಸಮರದ ಫಲಿತಾಂಶ ಹಿನ್ನೆಲೆ, ಮತ ಎಣಿಕೆಗೂ ಮುನ್ನವೇ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ದಂಪತಿ ಮನೆ ದೇವರಾದ ಶಿಕಾರಿಪುರದ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ದಂಪತಿ ಸಮೇತರಾಗಿ ಪೂಜೆ ಸಲ್ಲಿಸಿದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


