ಬೆಂಗಳೂರು: ಮೀಟೂ ಎಂಬ ಅಭಿಯಾನ ರಾಜ್ಯಕ್ಕೆ ಕಾಲಿಡುತ್ತಿದ್ದಂತೆ ಸ್ಯಾಂಡಲ್ ವುಡ್‍ನಲ್ಲಿ ಬಾಂಬ್‍ಗಳ ಮೇಲೆ ಬಾಂಬ್‍ಗಳು ಸಿಡಿಯುತ್ತಿವೆ. ಇದೀಗ ನಿರ್ದೇಶಕ ಗುರುಪ್ರಸಾದ್ ಅವರು ಮಾಜಿ ಪತ್ನಿ ಆರತಿ ಮೀಟೂ ಆರೋಪಕ್ಕೆ ಫೇಸ್‍ಬುಕ್‍ನಲ್ಲಿ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.ಈ ಮೂಲಕ ನಟಿ ಶೃಇಹರಿಹರನ್, ಸಂಗೀತ ಭಟ್ ತಾವೂ ಪತಿವ್ರತೆಯರು ಅಂತ ಸಾಬೀತು ಮಾಡಲು ಹೊರಟಿದ್ದಾರೆ ಎಂದು ಡೈಲಾಗ್ ಹೊಡೆದು ವಿವಾದ ಸೃಷ್ಟಿಸಿಕೊಂಡಿದ್ದ ನಿರ್ದೇಶಕ ಗುರುಪ್ರಸಾದ್ ಈಗ ಮತ್ತೊಂದು ಬಾಂಬ್ ಸಿಡಿಸಲು ಮುಂದಾಗಿದ್ದಾರೆ.ಮಾಜಿ ಪತ್ನಿ ಏನ್ ಹೇಳಿದ್ದರು?:
ಯಾವುದೇ ವ್ಯಕ್ತಿ ಯಾರ ಬಗ್ಗೆಯೂ ಮಾತನಾಡಿದರೂ ಅದು ಒಪ್ಪುವಂತಹ ವಿಷಯವಲ್ಲ ಅನ್ನೋದು ನನ್ನ ಅಭಿಪ್ರಾಯವಾಗಿದೆ. ನಾನು ಟಿವಿ, ನ್ಯೂಸ್ ಪೇಪರ್ ಓದದೇ ಇರುವುದರಿಂದ ಯಾರಾದ್ರೂ ಹೇಳಿದ್ರೆ ಅಷ್ಟು ಮಾತ್ರ ನನಗೆ ಗೊತ್ತಿರುತ್ತದೆ. ಆದ್ರೆ ನನ್ನ ಮಗಳು ಯೂಟ್ಯೂಬ್ ನಲ್ಲಿ ಬಂದಂತಹ ಲಿಂಕ್ ತೋರಿಸಿದಳು. ಅದನ್ನು ನೋಡಿದಾಗ ಯಾವುದೇ ಒಬ್ಬ ವ್ಯಕ್ತಿಗೆ ಇನ್ನೊಬ್ಬ ಹೆಣ್ಣು ಅಥವಾ ಮಹಿಳೆ ಹಾಗೂ ಟ್ರಾನ್ಸ್ ಜೆಂಡರ್ ಬಗ್ಗೆಯೂ ಈ ತರ ಮಾತನಾಡುವ ಹಕ್ಕು ಇರಲ್ಲ. ಗುರುಗೆ ಸ್ವಂತ ಮಗಳಿದ್ದಾಳೆ. ಹೀಗಾಗಿ ಎಲ್ಲರೂ ಹೆಣ್ಣು ಮಕ್ಕಳು ಸರಿಯಿಲ್ಲ ಅಂತ ಒಬ್ಬ ಅಪ್ಪನಾಗಿ ಹೇಳೋದಕ್ಕೂ ಮುಂಚೆ ಯೋಚನೆ ಮಾಡಬೇಕು. ಆತ ಯೋಚನೆ ಮಾಡುತ್ತಿಲ್ಲ ಅಂದ್ರೆ ಆತ ಅಪ್ಪನಾಗಿ ಬಿಹೇವ್ ಮಾಡ್ತಿಲ್ಲ ಅಂತ ಅರ್ಥ ಎಂದು ಪತಿ ಹೇಳಿಕೆಯ ವಿರುದ್ಧ ಗರಂ ಆಗಿದ್ದರು.ಯಾರ ಬಾಯಿಂದ ಹೆಣ್ಣು ಮಗು ಅಂತ ಪದ ಬರುತ್ತಾ ಇದೆ ಅಲ್ವಾ, ಆತ ತನ್ನ ಸ್ವಂತ 14 ವರ್ಷದ ಮಗಳನ್ನು ಹೆಂಡ್ತಿ ಸಮೇತ ಮಧ್ಯರಾತ್ರಿ ಆಚೆ ಹಾಕಿದ್ದರು. ಇದು ನಡೆದಿರುವ ಘಟನೆಯಾಗಿದೆ. ಆದ್ರೆ ನಾನು ಯಾವುದೇ ರಗಳೆ ರಂಪ ಮಾಡದೇ ಹೊರ ಬಂದಿದ್ದೇನೆ. ಒಬ್ಬ ವ್ಯಕ್ತಿಗೆ ನಾವು ಬೇಡ ಅಂತ ಹೇಳಿದ ಬಳಿಕ ಯಾವುದೇ ಗಲಾಟೆ ಮಾಡುವುದು ಬೇಕಿರಲಿಲ್ಲ. ಯಾಕಂದ್ರೆ ಆ ವ್ಯಕ್ತಿ ಬೇಡ ಅಂದ ಬಳಿಕ ರಗಳೆ ಮಾಡಿ ಪ್ರಯೋಜನವೇನು ಅಂತ ಎಲ್ಲೂ ಬರಲಿಲ್ಲ ಅಂತ ಹೇಳಿದ ಅವರು ಇದಾಗಿ 3 ವರ್ಷ ಆಯ್ತು ಅಂತ ಹೇಳಿದ್ದರು.ಒಬ್ಬ ಅಪ್ಪನಾಗಿಯೂ ಗುರು ಅವರ ಜವಾಬ್ದಾರಿಯನ್ನು ನಿಭಾಯಿಸುತ್ತಿಲ್ಲ. ಅವರ ಮಗಳನ್ನು ಬಂದು ನೋಡುವುದಿಲ್ಲ. ನಮಗೂ ಅವರಿಗೂ ಯಾವುದೇ ರೀತಿಯ ಸಂಪರ್ಕವೇ ಇಲ್ಲ. ಇಬ್ಬರೂ ಒಪ್ಪಿಕೊಂಡು ವಿಚ್ಛೇದನಕ್ಕೆ ಅಂತ ಹೋಗಿದ್ದೆವು. ಆಗ ಅವರು 2 ಸಲ ಬಂದ್ರು ಆ ನಂತರ ಕೋರ್ಟ್ ಗೂ ಬರುತ್ತಿಲ್ಲ. ಹೀಗಾಗಿ ಅವರ ಯಾವುದೇ ರೀತಿಯ ಸಂಪರ್ಕಕ್ಕೂ ನಾನು ಸಿಗುತ್ತಿಲ್ಲ. ಅವರ ಮನೆ ಹತ್ರ ಹೋದರೂ ಸಿಗುತ್ತಿಲ್ಲ. ಡಿವೋರ್ಸ್ ಪೇಪರ್ ಗೆ ಸಹಿ ಹಾಕಿ ಕೊಡಿ ಅಂದ್ರೂ ಅವರು ಸಿಗ್ತಿಲ್ಲ ಅಂತ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvhttps://www.youtube.com/watch?v=P0ht0YhqeXghttps://www.youtube.com/watch?v=u4enQ9slDccSign in to your account
Username or Email Address


Password

 Remember Me


