ಮೈಸೂರು: ಎದುರು ಮನೆ ಯುವತಿಯನ್ನು ಮದುವೆಯಾಗಲು ಒಪ್ಪದ ವಿವಾಹಿತನಿಗೆ ಆಕೆಯ ಮಾವಂದಿರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮೈಸೂರಿನಲ್ಲಿ ನಡೆದಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಮೈಸೂರಿನ ಕೆ.ಆರ್.ಮೊಹಲ್ಲಾ ನಿವಾಸಿ ಗೌಸ್ ಪೀರ್ ಹಲ್ಲೆಗೊಳಗಾದ ವ್ಯಕ್ತಿ. ವರುಣಾ ಪೊಲೀಸ್ ಠಾಣೆ ವ್ಯಾಪ್ತಿಯ ತೋಟದ ಮನೆಯೊಂದರಲ್ಲಿ ಕೆಲ ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಏನಿದು ಪ್ರಕರಣ?:
ಗೌಸ್ ಪೀರ್ ಮನೆಯ ಮುಂದಿನ ಮನೆಯ ರೇಷ್ಮಾ ಎಂಬ ಯುವತಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಆದರೆ ವಿವಾಹಿತನಾಗಿರುವ ಗೌಸ್ ಪೀರ್ ಮದುವೆ ವಿಚಾರವನ್ನು ತಳ್ಳಿಹಾಕಿದ್ದಾರೆ. ಇದರಿಂದ ಕೋಪಗೊಂಡ ರೇಷ್ಮಾಳ ಮಾವಂದಿರಾದ ಸಲೀಂ, ಇಮ್ರಾನ್, ಮುಬಾರಕ್ ಹಾಗೂ ಸಾಬು ಎಂಬವರು ಗೌಸ್ ಪೀರ್ ನನ್ನು ವರುಣಾ ಕ್ಷೇತ್ರದ ತೋಟವೊಂದಕ್ಕೆ ಕರೆದೊಯ್ದು ಕಂಬಕ್ಕೆ ಕಟ್ಟಿದ್ದಾರೆ. ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಗೌಸ್ ಒಪ್ಪದಿದ್ದಾಗ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


