ಮಂಡ್ಯ: ರೇಷನ್‍ಗೆ ಕ್ಯೂ ನಿಲ್ಲುವಂತೆ ಮಟನ್‍ಗಾಗಿ ಮಂಡ್ಯದ ಜನರು ಕ್ಯೂ ನಿಂತುಕೊಂಡಿದ್ದಾರೆ.ಶನಿವಾರ ಎಲೆಕ್ಷನ್ ಕಳೆಯುತ್ತಲೇ ರಿಲಾಕ್ಸ್ ಮೂಡಲ್ಲಿದ್ದ ಮಂಡ್ಯದ ಜನ ಇಂದು ಆರಾಮವಾಗಿ ಫ್ಯಾಮಿಲಿ, ಫ್ರೆಂಡ್ ಜೊತೆ ಬಾಡೂಟ ಮಾಡಲು ಮಟನ್ ಅಂಗಡಿಗೆ ಧಾವಿಸಿದ್ದಾರೆ. ಅಂಗಡಿಯ ಮಾಲೀಕ ಜನರ ಗುಂಪು ನೋಡಿ ಮಟನ್‍ಗಾಗಿ ಸರದಿ ಸಾಲಲ್ಲಿ ಬರುವಂತೆ ಸೂಚಿಸಿದ್ದಾರೆ.ಮಂಡ್ಯದ ಚಿಕ್ಕಮಂಡ್ಯ ರಸ್ತೆಯಲ್ಲಿ ಇರುವ ಗೋಪಾಲ್ ಮಟನ್ ಸ್ಟಾಲ್ ಮುಂದೆ ಈ ರೀತಿ ಕ್ಯೂ ಕಾಣುತ್ತಿದ್ದು, ಅಂಗಡಿ ಮಾಲೀಕ ಇಂದು ಸುಮಾರು 20 ಮರಿಗಳನ್ನು ಕಡಿದಿದ್ದಾರೆ. ಪ್ರತಿ ಕೆಜಿಗೆ 420 ರಂತೆ ಮಾರಾಟ ಮಾಡುತ್ತಿದ್ದು, ಇವತ್ತು ಒಂದು ದಿನ ಡಿಮ್ಯಾಂಡ್ ಜಾಸ್ತಿಯಾಗಿದೆ. ಇನ್ನೆರೆಡು ಗಂಟೆ ಹೋದರೆ ಮಟನ್ ಸಿಗೋದು ಡೌಟು ಎಂದು ಹೇಳುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


