ಚಿಕ್ಕೋಡಿ: ಅಪ್ರಾಪ್ತೆಯ ಜೊತೆಗೆ ಒಪ್ಪಿತ ಸಂಬಂಧವಿದ್ದರೂ ಅಪರಾಧವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇಂತಹದ್ದೇ ಪ್ರಕರಣವೊಂದು ಬೆಳಗಾವಿ ಜಿಲ್ಲೆಯಲ್ಲಿ ನಡೆದಿದ್ದು, ಪ್ರೀತಿಸುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಚಿಕ್ಕೋಡಿ ತಾಲೂಕಿನ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ ನಲ್ಲಿಯೇ ಅತ್ಯಾಚಾರ ಎಸಗಿದ್ದರೂ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಆಗಿದ್ದೇನು?:
ಮಂಜುನಾಥ ಕಾಗಲೆ (21) ಸ್ವಗ್ರಾಮದ ಬಾಲಕಿಯನ್ನು ಆಕೆ 7ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಪ್ರೀತಿಸುತ್ತಿದ್ದ. ಮಂಜುನಾಥ ಹುಕ್ಕೇರಿ ಪಟ್ಟಣದ ಡಾಬಾದಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ. ಬಾಲಕಿಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ಮಂಜುನಾಥ ಸೆಪ್ಟೆಂಬರ್ ತಿಂಗಳಿನಲ್ಲಿ ಅತ್ಯಾಚಾರ ಎಸಗಿದ್ದಾನೆ. ಮರ್ಯಾದೆ ಹೆದರಿದ ಬಾಲಕಿ ಈ ಕುರಿತು ಯಾರೊಬ್ಬರಿಗೂ ಹೇಳಿಕೊಂಡಿರಲಿಲ್ಲ.ಬಾಲಕಿಯ ಆರೋಗ್ಯ ಹಾಗೂ ಚಟುವಟಿಕೆಯಲ್ಲಿ ವ್ಯತ್ಯಾಸ ಕಂಡ ಪೋಷಕರು ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ತನ್ನ ಮೇಲೆ ಮಂಜುನಾಥ ಅತ್ಯಾಚಾರ ಎಸಗಿದ್ದಾಗಿ ಒಪ್ಪಿಕೊಂಡಿದ್ದಾಳೆ. ಈ ಕುರಿತು ಪೊಲೀಸರು ಶುಕ್ರವಾರ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ಮಂಜುನಾಥನನ್ನು ಬಂಧಿಸಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸುಪ್ರೀಕೋರ್ಟ್ ತೀರ್ಪು ಏನು?: ಒಪ್ಪಿತ ಅಕ್ರಮ ಸಂಬಂಧ ಅಪರಾಧವಲ್ಲ. ಆದರೆ 18 ವರ್ಷದೊಳಗಿನ ಬಾಲಕಿಗೆ ಒಪ್ಪಿಗೆ ಇದ್ದರೂ ಲೈಂಗಿಕ ಕ್ರೀಯೆಗೆ ಒಳಪಡಿಸಿದರೆ ಅದು ಅಪರಾಧ ಅಂತ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹೀಗಾಗಿ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


