ಬೆಂಗಳೂರು: ಭಾರೀ ವಿರೋಧದ ನಡುವೆಯೂ ಬಾಲಿವುಡ್ ನ ಹಾಟ್ ಬೆಡಗಿ ಸನ್ನಿ ಲಿಯೋನ್ ಬೆಂಗಳೂರಿಗೆ ಬಂದು ಸಖತ್ ಸ್ಟೆಪ್ ಹಾಕಿದ್ದು, ಸನ್ನಿ ಡ್ಯಾನ್ಸ್ ಗೆ ಪಡ್ಡೆ ಹುಡುಗರು ಫುಲ್ ಫಿದಾ ಆಗಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಸನ್ನಿಗೆ ಪುಂಡನೊಬ್ಬ ಕಿರಿಕ್ ಮಾಡಿದ್ದಾನೆ.ಸಾಕಷ್ಟು ಕುತೂಹಲ ಹುಟ್ಟಿಸಿದ್ದ ಬಾಲಿವುಡ್ ಹಾಟ್ ಬೆಡಗಿ ಸನ್ನಿ ನೈಟ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆದಿದೆ. ಸಾಕಷ್ಟು ವಿರೋಧದ ನಡುವೆಯೂ ಮಾನ್ಯತಾ ಟೆಕ್ ಪಾರ್ಕ್‍ನ ವೈಟ್ ಆರ್ಕಿಡ್‍ನಲ್ಲಿ ಟೈಮ್ ಕ್ರಿಯೇಷನ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಟ್ ಬೆಡಗಿ ಸನ್ನಿ ಲಿಯೋನ್ ಭಾಗವಹಿಸಿದ್ದರು.ಅಷ್ಟೇ ಅಲ್ಲದೇ ಕನ್ನಡದಲ್ಲಿ ರಾಜ್ಯೋತ್ಸವದ ಶುಭಾಶಯ ಹೇಳಿದ ಸನ್ನಿ ಲಿಯೋನ್ ಕನ್ನಡದ ಹಾಡುಗಳಿಗೂ ಸಖತ್ ಸ್ಟೆಪ್ ಹಾಕಿದ್ದಾರೆ. ಸನ್ನಿ ಸ್ಟೆಪ್‍ಗೆ ನೆರೆದಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದರೆ, ಪಡ್ಡೆ ಹೈಕ್ಳು ಫುಲ್ ಫಿದಾ ಆಗಿದ್ದಾರೆ. ಇನ್ನು ಗಾಯಕ ರಘು ದೀಕ್ಷಿತ್ ಕೂಡ ಸಾಂಗ್ ಹಾಡುವ ಮೂಲಕ ಸಖತ್ ಮನರಂಜನೆ ನೀಡಿದ್ದಾರೆ.ಇತ್ತ ಸನ್ನಿ ಲಿಯೋನ್ ‘ಶೇಷಮ್ಮ’ ಹಾಡಿಗೆ ಹೆಜ್ಜೆ ಹಾಕುವಾಗ ಸನ್ನಿ ಮೇಲೆ ಬಾಟಲ್ ಎಸೆದು ಪುಂಡನೊಬ್ಬ ರಾದ್ಧಾಂತ ಮಾಡಿದ್ದಾನೆ. ತಕ್ಷಣ ಬಾಟೆಲ್ ಎಸೆದರೆ ಸಿಸಿಟಿವಿ ನೋಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವೇದಿಕೆಯಲ್ಲೇ ಪುಂಡನಿಗೆ ನಿರೂಪಕ ರಿಯಾಜ್ ವಾರ್ನಿಂಗ್ ಕೊಟ್ಟಿದ್ದಾರೆ.ಸನ್ನಿ ನೈಟ್ಸ್ ನಲ್ಲಿ ಜನಸಾಗರವೇ ಹರಿದು ಬರುವ ನಿರೀಕ್ಷೆಯಲಿದ್ದ ಟೈಮ್ ಕ್ರಿಯೇಷನ್‍ಗೆ ಸನ್ನಿ ಸಖತ್ ಕೈ ಕೊಟ್ಟಿದ್ದಾರೆ. ಸುಮಾರು ಆರು ಸಾವಿರ ಜನ ಸೇರುವ ನಿರೀಕ್ಷೆಯಲ್ಲಿದ್ದ ಆಯೋಜಕರಿಗೆ ನಿರಾಸೆಯಾಗಿದೆ. ಸನ್ನಿ ನೋಡಲು ಪ್ರೇಕ್ಷಕರು ಮಾತ್ರ ಟಿಕೆಟ್ ಕೌಂಟರ್ ಕಡೆಗೆ ಬರಲೇ ಇಲ್ಲ. ಆದರೆ ಅತ್ಯಂತ ವಿರಳ ಸಂಖ್ಯೆಯಲ್ಲಿ ಬಂದ ಜನ ಸನ್ನಿ ಲಿಯೋನ್‍ರನ್ನು ಕಣ್ತುಂಬಿಕೊಂಡಿದ್ದಾರೆ.ಇನ್ನೂ ಟಿಕೆಟ್ ಕೌಂಟರ್ ಬಳಿ ಕೆಲ ಕಿಡಿಗೇಡಿಗಳು ಬ್ಲಾಕ್ ಟಿಕೆಟ್ ಮಾರುತ್ತಿದ್ದು, ಇದನ್ನು ನೋಡಿದ ಕೆಲ ಯುವಕರು ಹಾಗೂ ಕಿಡಿಗೇಡಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಸನ್ನಿಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದ ಕೆಲ ಸಂಘಟನೆಗಳು ಮಾನ್ಯತಾ ಟೆಕ್ ಪಾರ್ಕ್ ಹತ್ತಿರವೂ ಸುಳಿಯಲಿಲ್ಲ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvhttps://www.youtube.com/watch?v=-nwUjVYLoXkSign in to your account
Username or Email Address


Password

 Remember Me


