ಬೆಂಗಳೂರು: ಚಾಲೆಂಜಿಂಗ್ ದರ್ಶನ್ ಅವರಿಗೆ ಕಾರ್ ಅಪಘಾತ ಸಂಭವಿಸಿದ್ದು ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಗಾಯದ ನೋವಿನಲ್ಲೂ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ.ದರ್ಶನ್ ಅವರು ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದಾರೆ. ಆದ ಕಾರಣ ಅವರು ಆಗಾಗ ಅರಣ್ಯಗಳಿಗೆ ಹೋಗಿ ಪ್ರಾಣಿ, ಪಕ್ಷಿ ಮತ್ತು ಪ್ರಕೃತಿಯನ್ನು ವೀಕ್ಷಣೆ ಮಾಡಬೇಕು. ಇದು ಅವರ ಕರ್ತವ್ಯ ಕೂಡ ಆಗಿದೆ. ಆದರೆ ಇತ್ತೀಚೆಗೆ ದರ್ಶನ್ ಅವರಿಗೆ ಕಾರ್ ಅಪಘಾತವಾಗಿ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದರು. ಆದ್ದರಿಂದ ಅವರು ಅರಣ್ಯವನ್ನು ವೀಕ್ಷಣೆ ಮಾಡಲು ಸಾಧ್ಯವಾಗಲಿಕ್ಕಿಲ್ಲ ಎಂದು ಹೇಳಲಾಗುತ್ತಿತ್ತು.ಆದರೆ ನಟ ದರ್ಶನ್ ತಮ್ಮ ಗಾಯದ ನೋವಿನಲ್ಲೂ ಕಾಡಿಗೆ ಹೋಗಿ ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೈಯಲ್ಲಿ ಕ್ಯಾಮೆರಾ ಹಿಡಿದು ಪ್ರಕೃತಿಯ ಸೊಬಗನ್ನು ಸೆರೆ ಹಿಡಿದಿದ್ದಾರೆ. ಸಂತಸದಿಂದ ಅರಣ್ಯದಲ್ಲಿ ಸುತ್ತಾಡಿದ್ದಾರೆ. ಅರಣ್ಯದಲ್ಲಿ ಸುತ್ತಾಡುತ್ತಿದ್ದ ಫೋಟೋಗಳನ್ನು ಅವರ ಅಭಿಮಾನಿಗಳು ತೆಗೆದು ಟ್ಟಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.ದರ್ಶನ್ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಗಾಯದ ನಡುವೆಯೂ ಡಿ ಬಾಸ್ ಅರಣ್ಯ ರಾಯಭಾರಿಯಾಗಿ ವೀಕ್ಷಣೆ ಮಾಡಲು ಮೂಲಕ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.ದರ್ಶನ್ ಅವರಿಗೆ ಕಾಡು ಹಾಗೂ ವನ್ಯಜೀವಿಗಳ ಬಗ್ಗೆ ಸಾಕಷ್ಟು ಪ್ರೀತಿ ತೋರಿಸುತ್ತಾರೆ. ಹಾಗಾಗಿ ಅವರನ್ನು ಕರ್ನಾಟಕದಲ್ಲಿ ಅರಣ್ಯ ಇಲಾಖೆಯ ರಾಯಭಾರಿಯಾಗಿ ಆಯ್ಕೆ ಮಾಡಿದ್ದರು. ಅರಣ್ಯ ಇಲಾಖೆಯ ರಾಯಭಾರಿಯಾದ ಕಾರಣ ದರ್ಶನ್ ಅವರು ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಯ ಸಂದೇಶ ಸಾರುವ ಕೆಲಸವನ್ನು ಮಾಡಬೇಕು. ಜೊತೆಗೆ ಅರಣ್ಯಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಬೇಕಾಗುತ್ತದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvhttps://twitter.com/DarshanFc171/status/1058577636111335425Sign in to your account
Username or Email Address


Password

 Remember Me


